ಕರ್ನಾಟಕ

ಲೇವಾದೇವಿ, ಚೀಟಿ ವ್ಯವಹಾರಕ್ಕೆ ಲೈಸೆನ್ಸ್‌ ಕಡ್ಡಾಯ: ಸಹಕಾರ ಇಲಾಖೆ

Pinterest LinkedIn Tumblr

vidhana-soudhaಬೆಂಗಳೂರು: ರಾಜ್ಯದಲ್ಲಿ ಲೇವಾದೇವಿ ನಡೆಸುವ ವ್ಯಕ್ತಿ ಮತ್ತು ಸಂಸ್ಥೆಗಳು ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು
ಎಂದು ಸಹಕಾರ ಇಲಾಖೆ ತಿಳಿಸಿದೆ. ಲೇವಾದೇವಿ ಮತ್ತು ಹಣಕಾಸು ಸಂಸ್ಥೆಗಳು ಕರ್ನಾಟಕ ಲೇವಾದೇವಿಗಾರರ
ಕಾಯ್ದೆ-1961ರ ಪ್ರಕರಣ 5ರಡಿ ಮತ್ತು ಗಿರಿವಿದಾರರು ಕರ್ನಾಟಕ ಗಿರಿವಿದಾರರ ಕಾಯ್ದೆ-1961ರ ಪ್ರಕರಣ 3ರಡಿ ಕಡ್ಡಾಯವಾಗಿ ಪರವಾನಿಗೆ ಹೊಂದಿರಬೇಕು.

ಅಲ್ಲದೆ, ಚೀಟಿ ವ್ಯವಹಾರ ನಡೆಸಲು ನಿಬಂಧಕರಿಂದ ಅನುಮತಿ ಪಡೆದಿರಬೇಕು ಎಂದು ಹೇಳಿದೆ. ಸರ್ಕಾರದ ಅಧಿಸೂಚನೆಯಂತೆ ಲೇವಾದೇವಿದಾರರು ಭದ್ರತಾ ಸಾಲಕ್ಕೆ ವಾರ್ಷಿಕ ಶೇ. 14 ಮತ್ತು ಭದ್ರತೆ ರಹಿತ ಸಾಲಕ್ಕೆ ವಾರ್ಷಿಕ ಶೇ.16 ಮಾತ್ರ ಬಡ್ಡಿ ವಿಧಿಸಲು ಅವಕಾಶವಿರುತ್ತದೆ. ಇದಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸುವುದು ಅಪರಾಧ.

ಲೇವಾದೇವಿ ಹಣಕಾಸು ಸಂಸ್ಥೆಗಳು ಮತ್ತು ಗಿರವಿದಾರರು ಬಡ್ಡಿ ದರವನ್ನು ಬಿಂಬಿಸುವ ಫ‌ಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಸಾರ್ವಜನಿಕರಿಂದ ಅಧಿಕ ಬಡ್ಡಿ ವಸೂಲಾತಿ ಮಾಡಿದಲ್ಲಿ ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆ ನಿಷೇಧ ಅಧಿನಿಯಮ 2004ರ ಪ್ರಕಾರ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 30 ಸಾವಿರ ರೂ.ವರೆಗೆ ದಂಡ ವಿಧಿಸಬಹುದು ಎಂದು ಇಲಾಖೆ ತಿಳಿಸಿದೆ.

ಕಾಯ್ದೆ ಉಲ್ಲಂಘನೆ, ಅಧಿಕ ಬಡ್ಡಿ ವಸೂಲಾತಿ ಮಾಡಿದ ಅಥವಾ ಅನಧಿಕೃತವಾಗಿ ಲೇವಾದೇವಿ ವ್ಯವಹಾರ ಮಾಡುವುದು ಕಂಡುಬಂದಲ್ಲಿ ಜಿÇÉೆಯ ಜಿÇÉಾಧಿಕಾರಿಗಳು, ಪೊಲೀಸ್‌ ವರಿಷ್ಠಾಧಿಕಾರಿಗಳು, ಸಹಕಾರ ಸಂಘಗಳ ನಿಬಂಧಕರು, ನಂ.1, ಅಲಿ ಅಸYರ್‌ ರಸ್ತೆ, ಬೆಂಗಳೂರು-560 052, ದೂರವಾಣಿ ಸಂಖ್ಯೆ 080-22269636 ಅಥವಾ ಆಯಾ ಜಿÇÉಾ ಸಹಕಾರ ಸಂಘಗಳ ನಿಬಂಧಕರು, ಉಪ ನಿಬಂಧಕರನ್ನು ಸಂರ್ಕಿಸುವಂತೆ
ಸಹಕಾರ ಇಲಾಖೆ ಪ್ರಕಟಣೆ ತಿಳಿಸಿದೆ.

-ಉದಯವಾಣಿ

Comments are closed.