
ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ಸೆಪ್ಟಂಬರ್.4: ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಸಂಘ ಹಾಗೂ ಅದರ ಮಂಗಳೂರು ತಾಲೂಕು ಸಮಿತಿ, ತಾಲೂಕು ಬಂಟರ ಸಂಘ ಮಂಗಳೂರು, ಉಡುಪಿ, ದ.ಕ, ಕಾಸರಗೋಡು ಜಿಲ್ಲೆಯ ಬಂಟರ ಸಂಘಗಳ, ಇತರ ಸಂಘ-ಸಂಸ್ಥೆಗಳ, ಎಲ್ಲಾ ಜಾತಿ ಮತ ಬಾಂಧವರ, ಸಹಕಾರ, ಸಹಬಾಗಿತ್ವದಿಂದ ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರದಲ್ಲಿ ಸೆ.5ರಿಂದ 7ರ ವರೆಗೆ ಹಮ್ಮಿಕೊಂಡಿರುವ ಶ್ರೀ ಗಣೇಶೋತ್ಸವ ಸಮಾರಂಭವು ನಾಳೆಯಿಂದ ಆರಂಭಗೊಳ್ಳಲ್ಲಿದೆ.
ಈ ಪ್ರಯುಕ್ತ ಇಂದು (ರವಿವಾರ) ಸಂಜೆ ಶ್ರೀ ಶರವು ದೇವಸ್ಥಾನದ ಬಳಿಯಿರುವ ಶ್ರೀ ರಾಧಾಕೃಷ್ಣ ದೇವಾಸ್ಥಾನದಲ್ಲಿ ಪ್ರಾರ್ಥಿಸಿ ಶ್ರೀ ರಾಮದಾಸ ಆಚಾರ್ ರವರ ಶಿಷ್ಯರಿಂದ ರಚಿಸಲ್ಪಟ್ಟ ಶ್ರೀ ಸಿದ್ಧಿ ವಿನಾಯಕ ವಿಗ್ರಹವನ್ನು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಹಾಗೂ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮೇನೇಜಿಂಗ್ ಟ್ರಸ್ಟಿ ಶ್ರೀ ಮಾಲಾಡಿ ಅಜಿತ್ ಕುಮಾರ್ ರೈ ಅವರ ನೇತ್ರತ್ವದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರಕ್ಕೆ ಬರಮಾಡಿಕೊಳ್ಳಲಾಯಿತು.

ಮೆರವಣಿಯಲ್ಲಿ ಪ್ರತಿಭಾನ್ವೇಷನಾ ಸಮಿತಿಯ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ, ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳಾದ ಶ್ರೀ ಮಂಜುನಾಥ ಭಂಡಾರಿ ಶೆಡ್ಡೆ. ಶ್ರೀ ರವಿರಾಜ ಶೆಟ್ಟಿ. ಟ್ಟೆಗುತ್ತು. ಶ್ರೀ ಕೃಷ್ಣಪ್ರಸಾದ ರೈ.ಬೆಳ್ಳಿಪ್ಪಾಡಿ. ಶ್ರೀ ಕೆ.ಬಾಲಕೃಷ್ಣ ಶೆಟ್ಟಿ. ಬೆಳ್ಳಿಬೆಟ್ಟುಗುತ್ತು. ಸಿ ಎ. ಶಾಂತಾರಾಮ ಶೆಟ್ಟಿ. ಶ್ರೀ ದಿವಾಕರ ಸಾಮಾ ಚೇಳ್ಯಾರುಗುತ್ತು. ಶ್ರೀ ಕೃಷ್ಣರಾಜ ಸುಲಾಯ, ಅಡ್ಯಾರುಗುತ್ತು, ಶ್ರೀ ಬಿ.ಶೇಖರ ಶೆಟ್ಟಿ. ಶ್ರೀ ಶಶಿರಾಜ ಶೆಟ್ಟಿ ಕೊಳಂಬೆ, ಶ್ರೀಮತಿ ಪ್ರತಿಮಾ ಆರ್ ಶೆಟ್ಟಿ,ಶ್ರೀಮತಿ ಮೀನಾ ಆರ್ ಶೆಟ್ಟಿ. ಶ್ರೀ ಮಷ್ ರೈ. ಶ್ರೀ ಜಗದೀಶ್ ಶೆಟ್ಟಿ, ಶ್ರೀ ಅಶ್ವತ್ಥಾಮ ಹೆಗ್ಡೆ ಅಲ್ತಾರ್, ಶ್ರೀ ಜಯರಾಮ ಸಾಂತ, ಶ್ರೀ ಕೆ. ಉಮೇಶ ರೈ ಪದವು ಮೇಗಿನ ಮನೆ, ಉಲ್ಲಾಸ್ ಶೆಟ್ಟಿ ಪೆರ್ಮುದೆ,ಸುಂದರ್ ಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.
ನಾಳೆಯಿಂದ ಆರಂಭಗೊಳ್ಳಲ್ಲಿರುವ ಕಾರ್ಯಕ್ರಮಗಳು:
ನಾಳೆ ಬೆಳಿಗ್ಗೆ 9.15ಕ್ಕೆ ದ್ವಜಾರೋಹಣದೊಂದಿಗೆ ಶ್ರೀ ಗಣೇಶೋತ್ಸವದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ತೆನೆ ವಿತರಣೆ, ಶ್ರೀ ಸಿದ್ಧಿವಿನಾಯಕ ಮೂರ್ತಿ ಪ್ರತಿಷ್ಠೆ, ಗಣ ಹೋಮ, ಭಜನಾ ಸೇವೆಯೊಂದಿಗೆ ಮಧ್ಯಾಹ್ನ 12-೦೦ ಘಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ. ಅಪರಾಹ್ನ 12.30 ರಿಂದ ಸುಗಮ ಸಂಗೀತ, 3.00 ಘಂಟೆಗೆ ತಾಳಮದ್ದಲೆ. ಸಂಜೆ 5.00 ರಿಂದ 7.00 ಧಾರ್ಮಿಕ ಸಭೆಯು ಜರಗಲಿದ್ದು. 7.30 ರಿಂದ ರಂಗಪೂಜೆ, ಹೂವಿನ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ಕೃಷ್ಣ ಪಾರಿಜಾತ ನಡೆಯಲಿರುವುದು.

ದಿನಾಂಕ 6-೦9-2016 ಮಂಗಳವಾರ ಬೆಳಿಗ್ಗೆ 9-೦೦ ಪ್ರಾತಃಕಾಲ ಪೂಜೆಯ ನಂತರ ಭಕ್ತಿಗಾನಸುಧೆ. 10-೦೦ ಘಂಟೆಗೆ ಭಜನಾ ಸೇವೆ, 11-೦೦ ಮೂಡಪ್ಪ ಸೇವೆ, 12-೦೦ ಮಹಾ ಪೂಜೆ, ಪ್ರಸಾದ ವಿತರಣೆ ನಂತರ ಸಂಗೀತ ಗಾನ ಸಂಗಮ ಕಾರ್ಯಕ್ರಮ. ಸಂಜೆ 4.30 ಕ್ಕೆ ಅಷ್ಟೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗದ ಸೇವಾರ್ಥಿಗಳಿಂದ ಸಂಕಲ್ಪ. ಸಂಜೆ 5-೦೦ ರಿಂದ 7-೦೦ ಧಾರ್ಮಿಕ ಸಭಾ ಕಾರ್ಯಕ್ರಮ. ರಾತ್ರಿ7.30 ಕ್ಕೆ ರಂಗ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, 8-೦೦ ಭಕ್ತಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿರುವುದು. 2ದಿನಾಂಕ ೦7-09-2016 ಬುಧವಾರ ಬೆಳಿಗ್ಗೆ ೮-೦೦ ಪ್ರಾತಃಕಾಲ ಪೂಜೆ, 8.30ಕ್ಕೆ ಅಷ್ಟೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗ ಪ್ರಾರಂಭ, ರಂತರ ಭಜನಾ ಸೇವೆಯೊಂದಿಗೆ 11-00 ಘಂಟೆಗೆ ಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆಯ ನಂತರ ಮಹಾ ಅನ್ನ ಸಂತರ್ಪಣೆ ನಡೆಯಲಿರುವುದು.
ಅಪರಾಹ್ನ 3.30 ಕ್ಕೆ ವಿಸರ್ಜನಾ ಪೂಜೆ, ಭಜನಾ ಕಾರ್ಯಕ್ರಮ ಉದ್ಘಾಟನೆ ನಡೆಯಲಿರುವುದು, ಬಳಿಕ ದೀಪ ಪ್ರಜ್ವಲನೆಯೊಂದಿಗೆ ಶೋಭಾ ಯಾತ್ರೆಗೆ ಚಾಲನೆ ನೀಡಲಾಗುವುದು.
ಶೋಭಾಯಾತ್ರೆಯು ಓಂಕಾರ ನಗರದಿಂದ ಬಂಟ್ಸ್ ಹಾಸ್ಟಲ್ ವೃತ್ತ, ಪಿವಿಎಸ್, ಡೊಂಗರಕೇರಿ, ನ್ಯೂಚಿತ್ರಟಾಕೀಸ್, ರಥಬೀದಿಯಲ್ಲಿ ಸಾಗಿ ಶ್ರೀ ವೆಂಕಟರಮಣ ದೇವಸ್ಥಾನವಾಗಿ ಶ್ರೀ ಮಹಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ಶ್ರೀ ಸಿದ್ಧಿವಿನಾಯಕ ದೇವರ ವಿಗ್ರಹವನ್ನು ವಿಸರ್ಜಿಸಲಾಗುವುದು.
Comments are closed.