ಕರ್ನಾಟಕ

ಗಾಂಡು ಅಂದವನೆ ನಿಜವಾದ ಗಾಂಡು ಶಾಸಕ ಬಾಲುಗೆ ಬಸಪ್ಪ ತಿರುಗೇಟು

Pinterest LinkedIn Tumblr

ಗ಻ನದುಬೆಂಗಳೂರು, ಆ. ೨೩ – ಪ್ರಾಮಾಣಿಕ, ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿದ್ದ ನನ್ನ ಮಗನನ್ನು `ಗಾಂಡು’ ಅಂದವನೆ ನಿಜವಾದ `ಗಾಂಡು’ ಎಂದು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರ ತಂದೆ ಬಸಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಕಲ್ಲಪ್ಪ ಹಂಡಿಭಾಗ್ ಅವನು ದಡ್ಡ, ಗಾಂಡು ಎಂದು ಮಾಗಡಿ ಶಾಸಕ ಬಾಲಕೃಷ್ಣ ವಿವಾದವನ್ನು ಮೈಮೇಲೆ ಎಳೆದುಕೊಂಡ ಬೆನ್ನಲ್ಲೇ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಸಪ್ಪ, ನನ್ನ ಮಗ ಮಾನಸಿಕ ಒತ್ತಡಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೇ ಹೊರತು `ಗಾಂಡು’ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಮಗ ನಿಷ್ಠಾವಂತ ಪೊಲೀಸ್ ಅಧಿಕಾರಿ, ಅವನ ಬಗ್ಗೆ ನನಗೆ ಹೆಮ್ಮೆ ಇದೆ. ಅವನಂತಹ ಮಗನನ್ನು ಕಳೆದುಕೊಂಡಿದ್ದೇನೆ ಎನ್ನುತ್ತಲೇ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಲಾರಂಭಿಸಿದರು.
ಬಡತನದಲ್ಲೇ ಹುಟ್ಟಿದ, ಕಷ್ಟದಲ್ಲೇ ಓದಿದ, ಎಲ್ಲವನ್ನೂ ಕಲಿತುಕೊಂಡ ಡಿವೈಎಸ್ಪಿಯಾದ ಅಂತಹ ಮಗ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆಯಾಗುತ್ತದೆ. ಅಂತಹದರಲ್ಲಿ ನನ್ನ ಮಗನನ್ನು ಅವಹೇಳನಕಾರಿಯಾಗಿ ಮಾತನಾಡುವವರೇ ಅವಿವೇಕಿಗಳು ಎಂದು ತರಾಟೆಗೆ ತೆಗೆದುಕೊಂಡರು.
ನನಗೆ ಭೈರತಿ ಬಸವರಾಜ್ ಸುರೇಶ್ ಹಾಗೂ ಅವರ ಸ್ನೇಹಿತರು ನನಗೆ 7 ಲಕ್ಷ ರೂ.ಗಳ ನಗದು ಹಣವನ್ನು ಉದಾರವಾಗಿ ನೀಡಿದ್ದಾರೆ. ಅವರಿಗೆ ಮೊದಲು ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಸೊಸೆಗೆ ಉದ್ಯೋಗ ನೀಡಿದ್ದಾರೆ. ಅವರಿಗೂ ನನ್ನ ಕೃತಜ್ಞತೆಗಳು. ಮಗ ಕಳೆದುಕೊಂಡ ದುಃಖ ಇನ್ನೂ ಆರಿಲ್ಲ. ಇಂತಹ ಸ್ಥಿತಿ ಯಾವ ಹೆತ್ತವರಿಗೂ ಬರಬಾರದು, ನಾನು ಇನ್ನು ಹೆಚ್ಚಿಗೆ ಮಾತನಾಡಲಾರೆ ಎಂದು ಮತ್ತೊಮ್ಮೆ ಕಣ್ಣೀರಿಟ್ಟರು.
ಶಾಸಕ ರಾಜೇಂದ್ರ ಹಿಟ್ನಾಳ್ ಕಿಡಿಕಿಡಿ
ಬಾಲಕೃಷ್ಣ ಅವರ ಹೇಳಿಕೆಗೆ ಕಿಡಿಕಿಡಿಯಾದ ಶಾಸಕ ರಾಜೇಂದ್ರ ಹಿಟ್ನಾಳ್, ಕಲ್ಲಪ್ಪ ಹಂಡಿಭಾಗ್ ಅವರನ್ನು `ಗಾಂಡು’ ಎಂದು ಹೇಳಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಕಲ್ಲಪ್ಪ ಪರಿಶ್ರಮದಿಂದ ಮೇಲೆ ಬಂದು ಡಿವೈಎಸ್ಪಿ ಆಗಿದ್ದರೂ ಅವರ ಬಗ್ಗೆ ಶಾಸಕರೊಬ್ಬರು ಇಂತಹ ಪದ ಬಳಸಬಾರದಾಗಿತ್ತು. ನಿಜ ಸ್ಥಿತಿ ಏನು ಎಂಬುದನ್ನು ಅರಿತುಕೊಂಡು ಮಾತನಾಡಬೇಕು ಎಂದು ಕಿವಿಮಾತು ಹೇಳಿದರು.
ಈ ಸಮಯದಲ್ಲಿ ಹಾಜರಿದ್ದ ಕಲ್ಲಪ್ಪ ಹಂಡಿಭಾಗ್ ಅವರ ಸಹೋದರ ಯಲ್ಲಪ್ಪ ಹಾಗೂ ಅವರ ತಾಯಿ ಬಸವ್ವ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

Comments are closed.