ಬೆಂಗಳೂರು:ಆತ್ಮಹತ್ಯೆ ಮಾಡಿಕೊಂಡಿರುವ ಡಿವೈಎಸ್ಪಿಗಳಾದ ಎಂ.ಕೆ.ಗಣಪತಿ, ಕಲ್ಲಪ್ಪ ಹಂಡಿಬಾಗ್ ಹಾಗೂ ಐಎಎಸ್ ಅಧಿಕಾರಿ ಡಿ.ಕೆ.ರವಿ ರಣಹೇಡಿಗಳು. ಹಾಗಾಗಿ ದೇಶಕ್ಕಾಗಿ ಹೋರಾಡಿದವರ ಫೋಟೊ ಪ್ರದರ್ಶಿಸಬೇಕೇ ಹೊರತು. ಇಂತಹವರ ಫೋಟೋ ಪ್ರದರ್ಶಿಸಬೇಡಿ ಎಂದು ನಾನೊಬ್ಬ ದೇಶಭಕ್ತನಾಗಿ ಇವರ ಫೋಟೋ ಪ್ರದರ್ಶನ ತಡೆದೆ ಎಂದು ಕಾಂಗ್ರೆಸ್ ಮುಖಂಡ, ಇಂಧನ ಸಚಿವ ಡಿಕೆ ಶಿವಕುಮಾರ್ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
ನಾನೊಬ್ಬ ದೇಶಭಕ್ತನಾಗಿ, ಸಚಿವನಾಗಿ ಆತ್ಮಹತ್ಯೆಗೆ ಶರಣಾದವರ ಫೋಟೊ ಪ್ರದರ್ಶನ ಸರಿಯಲ್ಲ ಎಂದು ತಡೆದಿದ್ದೇನೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಏನಿದು ಘಟನೆ:
ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿನ ಸ್ವಾತಂತ್ರ್ಯೋತ್ಸವ ವೇದಿಕೆಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಶಾಲಾ ಮಕ್ಕಳ ನೃತ್ಯ ಪ್ರದರ್ಶನವನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದರು.
ಖಾಸಗಿ ಶಾಲೆಯ 250 ಮಕ್ಕಳು ಹುಟ್ಟೋದ್ಯಾಕೆ, ಸಾಯೋದ್ಯಾಕೆ ಏನಾದರೂ ಸಾಧಿಸಿ ಹೋಗೋಕೆ ಎಂಬ ಗೀತೆಗೆ ಹೆಜ್ಜೆ ಹಾಕುತ್ತಿದ್ದರು. ಮಕ್ಕಳ ಕೈಯಲ್ಲಿ ಆತ್ಮಹತ್ಯೆಗೆ ಶರಣಾದ ಡಿವೈಎಸ್ಪಿಗಳಾದ ಎಂ.ಕೆ.ಗಣಪತಿ, ಕಲ್ಲಪ್ಪ ಹಂಡಿಬಾಗ್ ಹಾಗೂ ನಿಗೂಢವಾಗಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಡಿ.ಕೆ.ರವಿ ಭಾವಚಿತ್ರವಿದ್ದವು. ಇದರಿಂದ
ಅಸಮಾಧಾನಗೊಂಡ ಸಚಿವರು, ನೃತ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸುವಂತೆ ಸೂಚಿಸಿದರು. ಡಿಡಿಪಿಐ ಅವರನ್ನುತರಾಟೆಗೆ ತೆಗೆದುಕೊಂಡಿದ್ದ ಘಟನೆ ನಡೆದಿತ್ತು. ಡಿಕೆಶಿ ಅವರ ವರ್ತನೆಗೆ ಟೀಕೆ ವ್ಯಕ್ತವಾಗಿತ್ತು.
-ಉದಯವಾಣಿ
Comments are closed.