ಕರ್ನಾಟಕ

ಮಕ್ಕಳ ಡ್ಯಾನ್ಸ್‌ ಅರ್ಧಕ್ಕೆ ನಿಲ್ಲಿಸಿ ಕಿಡಿ ಕಾರಿದ ಸಚಿವ ಡಿಕೆಶಿ!

Pinterest LinkedIn Tumblr

dksಮಂಡ್ಯ: ಇಲ್ಲಿನ ವಿವಿ ಮೈದಾನದಲ್ಲಿ ಸೋಮವಾರ ನಡೆದ 70 ನೇ ಸ್ವಾತಂತ್ರ್ಯೋತ್ಸವ ವೇಳೆ ಶಾಲಾ ಮಕ್ಕಳ ನೃತ್ಯವನ್ನು ಸಚಿವ ಡಿ.ಕೆ.ಶಿವಕುಮಾರ್‌ ಅವರು ಅರ್ಧಕ್ಕೆ ನಿಲ್ಲಿಸಿ ಕಿಡಿಕಾರಿದ ಪ್ರಸಂಗ ನಡೆದಿದೆ.

ಸಚಿವ ಈ ವರ್ತನೆಗೆ ಕಾರಣವಾಗಿದ್ದು ಮಕ್ಕಳ ಕೈಯಲ್ಲಿದ್ದ ಆತ್ಮಹತ್ಯೆಗೆ ಶರಣಾದ ಮೂವರು ಅಧಿಕಾರಿಗಳಾದ ಡಿ.ಕೆ.ರವಿ ,ಕಲ್ಲಪ್ಪ ಹಂಡಿಭಾಗ್‌ ಮತ್ತು ಎಂ.ಕೆ ಗಣಪತಿ ಅವರ ಫೋಟೋಗಳು !

ಧ್ವಜಾರೋಹಣದ ಬಳಿಕ ಶಾಲಾ ಮಕ್ಕಳಿಂದ ವಿವಿಧ ನೃತ್ಯಗಳನ್ನು ನಡೆಸಲಾಗುತ್ತಿತ್ತು. ಈ ವೇಳೆ ಶಾಲಾ ಮಕ್ಕಳು ಮೃತ ಅಧಿಕಾರಿಗಳ ಫೋಟೋಗಳನ್ನು ಹಿಡಿದು ನೃತ್ಯ ಮಾಡುತ್ತಿದ್ದನ್ನು ಕಂಡು ಆಕ್ರೋಶಿತರಾದ ಡಿಕೆಶಿ ನೃತ್ಯವನ್ನು ಅರ್ಧಕ್ಕೆ ತಡೆದರು ಅಲ್ಲದೆ ಡಿಡಿಪಿಐ ಗೆ ತರಾಟೆಗೆ ತೆಗದುಕೊಂಡರು.

ಮಕ್ಕಳು ಕನ್ನಡ ಚಿತ್ರದ ಹುಟ್ಟೋದ್ಯಾಕೆ ..ಸಾಯೋದ್ಯಾಕೆ ಎಂಬ ಹಾಡಿಗೆ ನೃತ್ಯ ಮಾಡುತ್ತಿದ್ದರು.

-ಉದಯವಾಣಿ

Comments are closed.