ಕರ್ನಾಟಕ

ಡಿಕೆಶಿ ಜತೆಗೆ ನನ್ನ ಹೆಸರು ಕೇಳಿಬರುತ್ತಿರುವುದು ಮುಜುಗರಕ್ಕೆ ಕಾರಣವಾಗಿದೆ: ಲಕ್ಷ್ಮೀ ಹೆಬ್ಬಾಳ್ಕರ್

Pinterest LinkedIn Tumblr

ಲ಻ತುಮಕೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ನನ್ನಂತ 10 ಹೆಣ್ಣು ಮಕ್ಕಳನ್ನು ರಾಜಕೀಯದಲ್ಲಿ ಬೆಳಸಿದ್ದಾರೆ. ಅವರು ನನ್ನ ರಾಜಕೀಯ ಗುರು. ಆದರೆ, ಇದೀಗ ಅವರ ಜೊತೆ ನನ್ನ ಹೆಸರು ತಳಕು ಹಾಕಿಕೊಂಡಿರುವುದು ಮುಜುಗುರ ಉಂಟುಮಾಡುತ್ತಿದೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಜೊತೆ ನನ್ನ ಹೆಸರು ತಳಕು ಹಾಕಿರುವುದು ಮುಜುಗುರ ಉಂಟುಮಾಡುತ್ತಿದೆ. ಆದರೆ, ಇದು ನಮ್ಮ ಶಕ್ತಿಯೂ ಹೌದು ಎಂದು ತಿಳಿಸಿದ್ದಾರೆ.

ರಾಜಕೀಯವಾಗಿ ನನ್ನನ್ನು ಪರಿಚಯಿಸಿದವರು ಮಾರ್ಗರೇಟ್ ಆಳ್ವಾ. ನಂತರ ರಾಜಕೀಯ ರಂಗದಲ್ಲಿ ಭದ್ರ ನೆಲೆಯೂರಿ ಬೆಳೆಸಲು ಡಿ.ಕೆ.ಶಿವಕುಮಾರ್ ನೆರವಾದರು. ನನ್ನಂತ ಹತ್ತಾರು ನಾಯಕಿಯರನ್ನು ಹುಟ್ಟು ಹಾಕುವ ಶಕ್ತಿ ಅವರಿಗಿದೆ. ಆದರೆ, ಇದೀಗ ಅವರ ಜೊತೆ ನನ್ನ ಹೆಸರು ತಳಕು ಹಾಕುತ್ತಿರುವುದು ಮುಜುಗುರ ಉಂಟುಮಾಡುತ್ತಿದೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments are closed.