ಲಕ್ನೋ,: ಹುಡುಗಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಾಲ್ಕು ಮತ್ತು ಆರು ವರ್ಷದ ಪುಟ್ಟ ಬಾಲಕರ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿದೆ. ಉತ್ತರಪ್ರದೇಶದ ಗೋರಕ್ಪುರದಲ್ಲಿ ಈ ನಂಬಲಾಗದ ಘಟನೆ ಕೇಳಿ ಬಂದಿದ್ದು ಕೃತ್ಯದ ಬಳಿಕ ಆ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಅವರಿಬ್ಬರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
6 ವರ್ಷದ ಸೋನು ಹಾಗೂ 4 ವರ್ಷದ ಮೋನು ತನ್ನ ಮಗಳನ್ನು ವಿವಸ್ತ್ರಗೊಳಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗೌರಕ್ಪುರ್ ಪೊಲೀಸ್ ಠಾಣೆಯಲ್ಲಿ ನಿರ್ಮಲಾ ದೇವಿ ಎಂಬಾಕೆ ಜುಲೈ 27 ರಂದು ದೂರು ನೀಡಿದ್ದಾಳೆ.
ಆ ಮಕ್ಕಳೆಲ್ಲಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ಇನ್ನು ಮಾಹಿತಿ ಸಿಕ್ಕಿಲ್ಲ, ಆದರೆ ಅವರ ಬಂಧನಕ್ಕೆ ಕೋರ್ಟ್ ಆದೇಶಿಸಿದೆ.
ಆದರೆ ಆರೋಪ ಹೊತ್ತಿರುವ ಮಕ್ಕಳ ಕುಟುಂಬದವರು ಪುಟ್ಟ ಬಾಲಕರ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಶಾಲೆಗೆ ಹೋಗಲೂ ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.
Comments are closed.