ರಾಷ್ಟ್ರೀಯ

ಸರಳ ಸಚಿವ ಬನ್ಶಿಧರ್ ಬೌದ್ಧ ಗುಡಿಸಲು ಕುಸಿತ

Pinterest LinkedIn Tumblr

uttaraಬಹರೈಚ್: ಗುಡಿಸಲಿನಲ್ಲಿ ವಾಸ ಮಾಡುತ್ತ ಸರಳ ಜೀವನಕ್ಕೆ ಮಾದರಿಯಾಗಿರುವ ಉತ್ತರ ಪ್ರದೇಶದ ಸಮಾಜ ಕಲ್ಯಾಣ ಸಚಿವ ಬಶಿಂದರ್ ಬೌದ್ದ ಅವರಿಗೆ ಸಂಕಷ್ಟ ಎದುರಾಗಿದೆ. ಭಾರಿ ಮಳೆಗೆ ಟೆಡಿಯಾ ಗ್ರಾಮದಲ್ಲಿರುವ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ.

ಅದೃಷ್ಟವಶಾತ್ ಗೋಡೆ ಕುಸಿತವಾದ ಕೋಣೆಯಲ್ಲಿ ಯಾರೂ ಮಲಗಿರಲಿಲ್ಲ. ಆ ಕೋಣೆಯಲ್ಲಿ ಹಳೆಯ ಸಾಮಾನುಗಳನ್ನು ಸಂಗ್ರಹಿಸಿಡಲಾಗಿತ್ತು.

ಗೋಡೆ ಕುಸಿತದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಸಚಿವರ ಮನೆ ಗೋಡೆ ಕುಸಿದಿರುವ ಮಾಹಿತಿ ಪಡೆದ ಕಂದಾಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿದರಾದರೂ ಅವರ ಸಹಾಯ ಪಡೆಯಲು ಸಚಿವರು ನಿರಾಕರಿಸಿದರು.

ಆಗಷ್ಟೇ ಲಕ್ನೋದಿಂದ ಮರಳಿದ್ದ ಸಚಿವರು ಘಟನೆ ನಡೆದಾಗ ಮತ್ತೊಂದು ಕೋಣೆಯಲ್ಲಿದ್ದರು. ಮಳೆ ನಿಲ್ಲುತ್ತಿದ್ದಂತೆ ಪತ್ನಿ ಲಜ್ಜಾವತಿ, ಮಕ್ಕಳಾದ ಅವನ್, ದೀಪಕ್ ಮತ್ತು ಸಮರ್ ಸಹಯೋಗದಿಂದ ಗೋಡೆ ಅವಶೇಷದಡಿ ಸಿಲುಕಿದ್ದ ಸಾಮಾನುಗಳನ್ನೆಲ್ಲ ಹೊರ ತೆಗೆದ ಸಚಿವರು ತಾವೇ ತೋಡು ತೋಡಿ ಕೋಣೆಯಲ್ಲಿದ್ದ ನೀರನ್ನು ಹೊರಹಾಕಿದರು.

Comments are closed.