ಕರ್ನಾಟಕ

ಕಿರುಕುಳಕ್ಕೆ ಬೇಸತ್ತು ಗಂಡನ ಕೊಲೆಗೈದ ಪತ್ನಿ

Pinterest LinkedIn Tumblr

jayammaಕನಕಪುರ,ಆ.10- ಗಂಡನಿಂದ ಮಾನಸಿಕವಾಗಿ ಜರ್ಜರಿತಳಾಗಿದ್ದ ಮಹಿಳೆಯೊಬ್ಬಳು ಆತನನ್ನು ಕೊಲೆಗೈದು ಪೊಲೀಸರ ಅತಿಥಿಯಾಗಿರುವ ಘಟನೆ ತಾಲ್ಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೋಡಿಹಳ್ಳಿ ಹೋಬಳಿ ತಟ್ಟೆಕೆರೆ ಗ್ರಾಮದ ನಿವಾಸಿ ನಾಗರಾಜ್ (55) ತನ್ನ ಹೆಂಡತಿಯಿಂದಲೇ ಹತ್ಯೆಗೊಳಗಾದ ವ್ಯಕ್ತಿಯಾಗಿದ್ದಾನೆ.
ಘಟನೆಯ ವಿವರ:

ಕಳೆದ 30 ವರ್ಷಗಳ ಹಿಂದೆ ಜಯಮ್ಮ ಎಂಬಾಕೆಯ ಜೊತೆಗೆ ವಿವಾಹವಾಗಿದ್ದ ಈತ ತನ್ನ ಹೆಂಡತಿಗೆ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ. ಗಂಡನ ಕಿರುಕುಳಕ್ಕೆ ಮನನೊಂದಿದ್ದ ಜಯಮ್ಮ ಗಂಡನನ್ನು ಕೊಲೆಮಾಡಲು ನಿಶ್ಚಯಿಸಿದ್ದಳು. ಇದಕ್ಕಾಗಿ ತಿಪ್ಪೂರು ಗ್ರಾಮದ ತನ್ನ ಅಣ್ಣನ ಹೆಂಡತಿಯಾದ ಕಮಲಮ್ಮ ಎಂಬಾಕೆಯ ಸಹಾಯವನ್ನು ಪಡೆದುಕೊಂಡು ಸೋಮವಾರ ಬೆಳಗಿನ ಜಾವ 2.30ರ ಸಮಯದಲ್ಲಿ ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ವಿಷಯ ತಿಳಿದ ಕೋಡಿಹಳ್ಳಿ ಪೊಲೀಸರ ಸ್ಥಳಕ್ಕೆ ಧಾವಿಸಿ ಮಾಹಿತಿ ಕಲೆಹಾಕಿ ಪ್ರಕರಣ ದಾಖಲಿಸಿಕೊಂಡ ನಂತರ ವಿಚಾರಣಾ ತನಿಖೆಗಾಗಿ ಪತ್ನಿ ಜಯಮ್ಮನನ್ನು ಠಾಣೆಗೆ ಕರೆತಂದು ಹೆಚ್ಚಿನ ರೀತಿಯಲ್ಲಿ ವಿಚಾರಿಸಿದಾಗ ಸಬ್‍ಇನ್ಸ್‍ಪೆಕ್ಟರ್ ದೀಪಕ್‍ರವರ ಮುಂದೆ ತಾನೇ ಕೊಲೆಮಾಡಿರುವುದಾಗಿ ತಪ್ಪೋಪಿಗೆ ಹೇಳಿಕೆ ನೀಡಿದ್ದಾಳೆ.
ಕೊಲೆಗೆ ಸಹಕಾರ ನೀಡಿದ್ದ ಕಮಲಮ್ಮ ಮತ್ತು ಜಯಮ್ಮ ಇಬ್ಬರನ್ನು ಬಂಧಿಸಿರುವಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Comments are closed.