ನವದೆಹಲಿ, ಆ.10- ಇಡೀ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ರಾಜಧಾನಿಯ ನಿರ್ಭಯಾ ಗ್ಯಾಂಗ್‍ರೇಪ್ ಪ್ರಕರಣದ ಬಗ್ಗೆ ಆಪಾದಿತರ ಪರ ವಕೀಲ ಎಂ.ಎಲ್.ಶರ್ಮ ವಿಲಕ್ಷಣ ಹೇಳಿಕೆ ನೀಡಿದ್ದು, ಗೊಂದಲಕ್ಕೆ ಕಾರಣವಾಗಿದೆ. ನಿರ್ಭಯಾ (ಜ್ಯೋತಿಸಿಂಗ್) ಗೆಳೆಯನ ಸಹಕಾರದೊಂದಿಗೆ ಸಹಕಾರದೊಂದಿಗೆ ಓರ್ವ ರಾಜಕಾರಣಿಯ ಕುಮ್ಮಕ್ಕಿನಿಂದ ಈ ಘಟನೆ ನಡೆದಿದೆ ಎಂದು ಮರಣದಂಡನೆಗೆ ಗುರಿಯಾಗಿರುವ ಇಬ್ಬರು ಆಪಾದಿತರ ಪರ ವಕೀಲ ಶರ್ಮ ಹೇಳಿಕೆ ನೀಡಿದ್ದು, ಹೊಸ ವಿವಾದ ಹುಟ್ಟುಹಾಕಿದೆ.
ಆಕೆಯ ಗೆಳೆಯ ಮತ್ತು ಸ್ಥಳೀಯ ರಾಜಕಾರಣಿ ಆಪಾದಿತ ರಾಮ್‍ಸಿಂಗ್ ಸಹೋದರನಿಗೆ 1,000ರೂ.ಗಳನ್ನು ನೀಡಿ ಯಾವುದೇ ಸನ್ನಿವೇಶದಲ್ಲೂ ರಕ್ಷಣೆ ನೀಡುವುದಾಗಿ ಕೃತ್ಯ ಎಸಗಲು ಕುಮ್ಮಕ್ಕು ನೀಡಿದರು. ಆದರೆ, ಅವರು ಮೋಸ ಮಾಡಿದ್ದರಿಂದ ಆರೋಪಿಗಳು ಎಲ್ಲ ವಿಷಯವನ್ನೂ ಬಹಿರಂಗಗೊಳಿಸಿದರು ಎಂದು ವಕೀಲರು ತಮ್ಮದೇ ಆದ ಸಿದ್ಧಾಂತ ಮಂಡಿಸಿದ್ದಾರೆ.
ಈ ಆರೋಪಿಗಳು ಆಕೆಯ ಗೆಳೆಯನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಿದರು. ಪೊಲೀಸರ ಭಯದಿಂದ ಗ್ಯಾಂಗ್‍ರೇಪ್ ಮತ್ತು ಬರ್ಬರ ಕೊಲೆ ಪ್ರಕರಣವನ್ನು ಒಪ್ಪಿಕೊಂಡೆಂದು ವಕೀಲರು ವಾದಿಸಿದ್ದಾರೆ. ಡಿಸೆಂಬರ್ 16, 2012ರ ದೆಹಲಿಯಲ್ಲಿ ಬಸ್ಸೊಂದರಲ್ಲಿ ನಿರ್ಭಯಾಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬರ್ಬರವಾಗಿ ಥಳಿಸಿದರು. ಆಕೆ ಸಿಂಗಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಳು.
Comments are closed.