ಕರ್ನಾಟಕ

ಯುವಕನ ಮೇಲೆ ಶಾಸಕ ಹ್ಯಾರೀಸ್ ಪುತ್ರನ ಪೌರುಷ

Pinterest LinkedIn Tumblr

harishಬೆಂಗಳೂರು,ಆ.೧೦-ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹ್ಯಾರಿಸ್ ಪುತ್ರ ಉಮರ್ ಅವರು ಕುಡಿದ ಮತ್ತಿನಲ್ಲಿ ಯುವಕರೊಬ್ಬರ ಮೇಲೆ ಗಂಭೀರ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಶಾಂತಿನಗರದ ಪ್ಲಾನ್ ಬಿ ಪಬ್‌ನಲ್ಲಿ ನಿನ್ನೆ ಮಧ್ಯಾಹ್ನ ಎಂಎಲ್‌ಎ ಮಗ ಎಂದು ಹೇಳಿಕೊಂಡು ನನ್ನ ಮೇಲೆ ಉಮರ್ ಹಲ್ಲೆ ಮಾಡಿದ್ದಾರೆ ಎಂದು ನೊಂದ ಯುವಕ ಅಶೋಕನಗರ ಠಾಣೆಗೆ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರಿಗೆ ನೀಡಿರುವ ದೂರು ವಾಪಸು ಪಡೆಯುವಂತೆ ಯುವಕನ ಮೇಲೆ ಒತ್ತಡ ತರಲಾಗಿದೆ ಎಂದು ಹೇಳಲಾಗಿದೆ.

ಹ್ಯಾರಿಸ್ ಅವರ ಪುತ್ರ ಉಮರ್‌ನ ವಿರುದ್ಧ ಯಾವುದೇ ದೂರು ಬಂದಿಲ್ಲ ಆದರೂ ಘಟನೆ ನಡೆದಿದೆ ಎನ್ನಲಾದ ಶಾಂತಿನಗರದ ಪ್ಲಾನ್ ಬಿ ಪಬ್‌ನಲ್ಲಿ ಪರಿಶೀಲನೆ ನಡೆಸುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಉಮರ್‌ನ ಗೂಂಡಾ ವರ್ತನೆ ಇದೇ ಮೊದಲಲ್ಲ. ಕಳೆದ ೬ ತಿಂಗಳ ಹಿಂದೆ ಬೌರಿಂಗ್ ಕ್ಲಬ್ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದು ಹಲ್ಲೆ ಮಾಡಿದ್ದು ಹ್ಯಾರಿಸ್ ಪುತ್ರನಲ್ಲ ಆತನ ಹೆಸರನ್ನು ಹೇಳಿಕೊಂಡು ಬೇರೊಬ್ಬ ಯುವಕ ಮಾಡಿದ್ದಾನೆ ಎಂದು ಹೇಳಲಾಗಿದೆ.

Comments are closed.