
ಬೆಂಗಳೂರು: ಹಿರಿಯ ನಟ ಸಂಕೇತ್ ಕಾಶಿ ಅವರ ಅಂತ್ಯಕ್ರಿಯೆ ಇಂದು ಬನಶಂಕರಿ ಬಳಿಯ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು. ವೀರಶೈವ ಸಂಪ್ರದಾಯದಂತೆ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.
ಅನಾರೋಗ್ಯದಿಂದ ವಿಜಯನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಕೇತ್ ಕಾಶಿ ನಿನ್ನೆ ಮಧ್ಯಾಹ್ನ ಇಹಲೋಕ ತ್ಯಜಿಸಿದರು. ಇಂದು ಅಪಾರ ಬಂಧು-ಮಿತ್ರರು ಹಾಗೂ ಉದ್ಯಮದ ಸ್ನೇಹಿತರ ಸಮ್ಮುಖದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.ನಟ ಸಂಕೇತ್‍ಕಾಶಿ ಅಂತ್ಯಕ್ರಿಯೆ ಇದಕ್ಕೂ ಮುನ್ನ ಸಚಿವೆ ಉಮಾಶ್ರೀ, ವಿ.ಸೋಮಣ್ಣ, ರಂಗಾಯಣ ರಘು, ನಟ ಜಗ್ಗೇಶ್, ಅರುಣ್ ಸಾಗರ್, ಶ್ರೀನಿವಾಸಮೂರ್ತಿ, ರಂಗಭೂಮಿ ಕಲಾವಿದೆ ಬಿ.ಜಯಶ್ರೀ, ಚಂದ್ರಶೇಖರ್, ನಿರ್ದೇಶಕ ಎಂ.ಡಿ.ಶ್ರೀಧರ್, ನೃತ್ಯ ನಿರ್ದೇಶಕ ಗಣೇಶ್, ಹಾಸ್ಯನಟ ಲಯನ್ ಕೋಕಿಲಾ ಮತ್ತಿತರರು ಕಾಶಿಯವರ ಅಂತಿಮ ದರ್ಶನ ಪಡೆದರು.
Comments are closed.