ಬೆಂಗಳೂರು, ಆ. ೩- ಮೈಸೂರು ಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟ ಬೆನ್ನಲ್ಲೇ ರಾಜ್ಯ ಹೈಕೋರ್ಟಿನ ಭದ್ರತೆಯ ಬಗ್ಗೆ ನೂರಾರು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಹೈಕೋರ್ಟ್‌ನಲ್ಲಿ ಸೂಕ್ತ ಭದ್ರತೆಯಿಲ್ಲ ಎಂಬ ಕೂಗು ಬಲವಾಗಿ ಕೇಳಿಬಂದಿದೆ. ಹೈಕೋರ್ಟ್‌ನಲ್ಲಿ 6 ಬ್ಯಾಗ್ ಸ್ಕ್ಯಾನರ್‌ಗಳಿವೆ. ಆದರೆ ಅದರಲ್ಲಿ ಒಂದು ಹಾಳಾಗಿದ್ದು, ಇನ್ನುಳಿದ 5 ಸುಸ್ಥಿತಿಯಲ್ಲಿದ್ದರೂ ಸದ್ಬಳಕೆಯಾಗುತ್ತಿಲ್ಲ. ಇನ್ನು ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಬಳಿ ಇರುವ ಲೋಹ ಪರೀಕ್ಷೆ ಯಂತ್ರಗಳು ಹಾಳಾಗಿದ್ದು, ಸ್ಕ್ಯಾನರ್ ಸುಸ್ಥಿತಿಯಲ್ಲಿಲ್ಲ. ಇನ್ನು ಹೈಕೋರ್ಟ್‌ನ ಇನ್ನೆರಡು ದ್ವಾರಗಳಾದ ಕಬ್ಬನ್ ಪಾರ್ಕ್ ಗೇಟ್ ಹಾಗೂ ಪೋಸ್ಟ್ ಆಫೀಸ್ ಗೇಟ್ ಬಳಿ ಇರುವ ಸ್ಕ್ಯಾನರ್‌ಗಳಲ್ಲಿ ಯುಪಿಎಸ್ ಹಾಳಾಗಿದ್ದು ವಿದ್ಯುತ್ ಪೂರೈಕೆ ಇದ್ದಾಗ ಮಾತ್ರ ಕೆಲಸ ಮಾಡುತ್ತವೆ.
ಆಕ್ಸಿಜನ್ ಸಿಲಿಂಡರ್‌ಗಳ ಅವಧಿ ಮುಕ್ತಾಯವಾಗಿದ್ದರೂ ಮತ್ತೇ ತುಂಬಿಲ್ಲ. ಇನ್ನು ಕನಿಷ್ಠ 58 ಪೊಲೀಸ್ ಭದ್ರತಾ ಸಿಬ್ಬಂದಿ ಇರಬೇಕು. ಆದರೆ ಪ್ರಸ್ತುತ ಹೈಕೋರ್ಟ್‌ನಲ್ಲಿ ಕೇವಲ 30 ಸಿಬ್ಬಂದಿ ಇದ್ದಾರೆ. ಹೈಕೋರ್ಟ್‌ನಲ್ಲಿ ಸಾಕಷ್ಟು ಸಿಸಿಟಿವಿಗಳಿವೆ. ಹೀಗಿದ್ದೂ, ಹೈಕೋರ್ಟ್ ಗೇಟ್‌ನಲ್ಲಿ ಸೂಕ್ತ ರೀತಿಯಲ್ಲಿ ಭದ್ರತಾ ಪರಿಶೀಲನೆ ನಡೆಸುತ್ತಿಲ್ಲ. ಹೀಗಾಗಿ ಯಾರು ಬೇಕಾದರೂ ಒಳಗೆ ನುಗ್ಗಿ ಕಾರ್ಯ ಕಲಾಪದಲ್ಲಿ ಭಾಗವಹಿಸುವ ಸ್ಥಿತಿ ಇದೆ ಅಂತ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಇಲ್ಲಿನ ನ್ಯಾಯವಾದಿಗಳು.
ಇನ್ನು ಮೈಸೂರು ಘಟನೆಯಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಹೈಕೋರ್ಟ್ ರಿಜಿಸ್ಟಾರ್ ಜೊತೆ ಚರ್ಚೆ ನಡೆಸಿದ್ದು, ಹೆಚ್ಚಿನ ಸೌಲಭ್ಯ ಒದಗಿಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ. ಹೀಗಾಗಿ ಇನ್ನು ಹೈಕೋರ್ಟ್ ಭದ್ರತೆ ಇನ್ನಷ್ಟು ಬಿಗಿಯಾಗೊ ಸಾಧ್ಯತೆಯಿದೆ.
Comments are closed.