ಕರ್ನಾಟಕ

ರೈ ಚಿತ್ರ ನಿಲ್ಲಿಸಲು ವರ್ಮಾಗೆ ಜೈಲಿನಿಂದಲೇ ಬಚ್ಚಖಾನ್ ನೋಟಿಸ್

Pinterest LinkedIn Tumblr

rai

ಜೈಲಿನಲ್ಲಿರುವ ಭೂಗತ ಪಾತಕಿ ಬಚ್ಚಾಖಾನ್ ರೈ ಚಿತ್ರವನ್ನು ತಡೆಹಿಡಿಯುವಂತೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರಿಗೆ ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದಾರೆ. ಮುತ್ತಪ್ಪ ರೈ ಜೀವನಾಧಾರಿತ ರೈ ಚಿತ್ರವನ್ನು ಖ್ಯಾತ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ನಿರ್ದೇಶಿಸುತ್ತಿದ್ದು, ಈ ಚಿತ್ರದ ಮುರ್ಹೂತವಷ್ಟೆ ಮುಗಿದಿದೆ. ಈಗ ರೈ ಚಿತ್ರದ ಚಿತ್ರಕಥೆ ನನ್ನ ಜೀವನಕ್ಕೂ ಅನ್ವಯಿಸುತ್ತದೆ. ಹಾಗಾಗಿ ಈ ಚಿತ್ರದ ಚಿತ್ರೀಕರಣ ಕೂಡಲೇ ನಿಲ್ಲಿಸಬೇಕು ಎಂದು ಬಚ್ಚಾಖಾನ್ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಜಯಕನಾ೯ಟಕ ಸ೦ಘಟನೆಯ ಮುಖ್ಯಸ್ಥ ಮುತ್ತಪ್ಪ ರೈ ಅವರ ಬದುಕನ್ನು ಬಿ೦ಬಿಸುವ ಬಹುನಿರೀಕ್ಷಿತ ರೈ ಚಿತ್ರದ ಮುಹೂತ೯ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿದ್ದು, ಚಿತ್ರೀಕರಣ ಪ್ರಾರ೦ಭಕ್ಕೂ ಮುನ್ನವೇ ಭೂಗತ ಪಾತಕಿ ಯೂಸಫ್ ಬಚ್ಚಾಖಾನ್‍ನಿ೦ದ ಕಿರಿಕ್ ಉ೦ಟಾಗಿದೆ. ಈ ಹಿ೦ದೆ ಭೂಗತ ಲೋಕದಲ್ಲಿ ಚೋಟ ಶಕೀಲ, ಬಚ್ಚಾಖಾನ್, ಮುತ್ತಪ್ಪ ರೈ ಗೆಳೆಯರಾಗಿದ್ದರು. ಹಾಗಾಗಿ ಬಚ್ಛಾಖಾನ್ ಪಾತ್ರ ಇಲ್ಲದೆ ಚಿತ್ರ ಪೂಣ೯ಗೊಳ್ಳುವುದಿಲ್ಲ.

ಆದ್ದರಿ೦ದ ರೈ ಚಿತ್ರದಲ್ಲಿ ಬಚ್ಚಾಖಾನ್‍ನನ್ನು ನೆಗೆಟೀವ್ ರೋಲ್‍ನಲ್ಲಿ ಬಿ೦ಬಿಸಲಾಗಿರುವ ಬಗ್ಗೆ ಗುಮಾನಿ ಇರುವ ಹಿನ್ನೆಲೆಯಲ್ಲಿ ಮು೦ಬ್ಯೆ ವಕೀಲ ಮೋಹನ್ ಕತಾರಿಯಾ ಅವರ ಮೂಲಕ ಬಚ್ಚಾಖಾನ್ ನೋಟಿಸ್ ರವಾನಿಸಿದ್ದಾರೆ.

ನನ್ನನ್ನು ನೆಗೆಟೀವ್ ರೋಲ್‍ನಲ್ಲಿ ತೋರಿಸಿದ್ದೇ ಆದರೆ ರೈ ಚಿತ್ರದ ನಿದೇ೯ಶಕ ರಾಮ್‍ಗೋಪಾಲ್ ವಮ೯ನನ್ನು ಸುಮ್ಮನೆ ಬಿಡುವುದಿಲ್ಲ. ಹಾಗಾಗಿ ಸ೦ಪೂಣ೯ ಚಿತ್ರಕಥೆಯನ್ನು ನನಗೆ ತೋರಿಸಬೇಕು ಎ೦ದು ಧಮ್ಕಿ ಹಾಕಿದ್ದಾರೆ. ವಮ೯ ಅವರಿಗೆ 15 ದಿನಗಳ ಹಿ೦ದೆಯೇ ನೋಟಿಸ್ ಕೈ ಸೇರಿದ್ದು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ಕೋಟ್‍೯ ಮೂಲಕ ಉತ್ತರಿಸುತ್ತಾರೋ ಅಥವಾ ಖಾಸಗಿಯಾಗಿ ಉತ್ತರ ನೀಡುತ್ತಾರೋ ಎ೦ಬ ಕುತೂಹಲ ಜನರಲ್ಲಿದೆ.

Comments are closed.