ಕರ್ನಾಟಕ

ಭಾರೀ ವಾಹನ ಕಳ್ಳನ ಸೆರೆ

Pinterest LinkedIn Tumblr

29Jalahalli1-715x350ಬೆಂಗಳೂರು, ಜು.೨೯- ವಾಹನ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಜಾಲಹಳ್ಳಿ ಪೊಲೀಸರು, ೬೦ ಲಕ್ಷ ರೂ. ಮೌಲ್ಯದ ಒಟ್ಟು ೯ ವಿವಿಧ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಯಶವಂತಪುರ ಮೋಹನ್ ಕುಮಾರ್ ನಗರ, ಅಕ್ಕಯ್ಯಪ್ಪ ಗಾರ್ಡನ್ ನಿವಾಸಿ ಪ್ರಭಾಕರ (೩೧) ಬಂಧಿತ ಆರೋಪಿ. ಈತನನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಹಲವು ವಾಹನ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿಂದೆ ಮೋಸ ಮಾಡಿ ಕಳವು ಮಾಡಿದ್ದ ಸುಮಾರು ೬೦,೦೦,೦೦೦ ರೂ. ಮೌಲ್ಯದ ಒಟ್ಟು ೯ ವಿವಿಧ ವಾಹನಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ.

ಈತನು ಈ ಹಿಂದೆ ಕಲಾಸಿಪಾಳ್ಯ ಮತ್ತು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯ ಇದೇ ರೀತಿಯ ಪ್ರಕರಣಗಳಲ್ಲಿ ಸಹ ಭಾಗಿಯಾಗಿದ್ದಾನೆ.

ಆರೋಪಿಯು ಹಳೆಯ ಕಾರುಗಳನ್ನು ಮಾರಾಟ ಮಾಡಿಕೊಡುವುದಾಗಿ ಮಾಲೀಕರಿಗೆ ನಂಬಿಸಿ, ಕಾರನ್ನು ಟ್ರಯಲ್ ನೋಡುವುದಾಗಿ ಹೇಳಿ ಕಳವು ಮಾಡಿಕೊಂಡು ಹೋಗಿ ಮೋಸ ಮಾಡುತ್ತಿದ್ದ. ಬಳಿಕ ಕಾರನ್ನು ಬೇರೆಯವರಿಗೆ ಮಾರಾಟ ಮಾಡಿ ದಾಖಲಾತಿಗಳನ್ನು ಕೊಡದೇ ಹಣ ಪಡೆದು ಮೋಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.