ಬೆಂಗಳೂರು/ದಾವಣಗೆರೆ; ಮಾಜಿ ಸಚಿವ, ಉದ್ಯಮಿ ಶಾಮನೂರು ಶಿವಶಂಕರಪ್ಪ ಮಕ್ಕಳ ಮನೆಗಳ ಮೇಲೆ ಐಟಿ ಅಧಿಕಾರಿಗಳು ಮನೆ, ಕಚೇರಿಗೆ ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಶಾಮನೂರು ಮಕ್ಕಳಾದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಎಸ್.ಎಸ್.ಗಣೇಶ್ ಹಾಗೂ ಎಸ್.ಎಸ್.ಬಕ್ಕೇಶ್ ಅವರ ಬೆಂಗಳೂರು ಹಾಗೂ ದಾವಣಗೆರೆ ನಿವಾಸ, ಲಕ್ಷ್ಮೀ ಫ್ಲೋರ್ ಮಿಲ್, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ದಾಳಿ ವೇಳೆ ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ ಅವರು ನಿವಾಸದಲ್ಲಿ ಇರಲಿಲ್ಲವಾಗಿತ್ತು. ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದೆ.
-ಉದಯವಾಣಿ
Comments are closed.