ಕರ್ನಾಟಕ

ಪುರುಷರು ಮತ್ತು ಮಹಿಳೆಯರ ಅಂಗಿಯ ಬಟನ್‌ಗಳ ಇಂಟರೆಸ್ಟಿಂಗ್ ವಿಷಯ

Pinterest LinkedIn Tumblr

defrns_shirt_photo

ಕೆಲವೊಂದು ವಿಷಯಗಳು ನಾವು ತುಂಬಾ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಅದು ನಮ್ಮ ಗಮನಕ್ಕೆ ಬರುತ್ತದೆ. ಪುರುಷರು ಮತ್ತು ಮಹಿಳೆಯರ ಅಂಗಿಯ ಬಟನ್ ಅನ್ನು ಯಾವತ್ತಾದರೂ ನೀವು ಗಮನಿಸಿದ್ದೀರಾ?

ಅದರಲ್ಲಿ ನಿಮಗೆ ಯಾವುದಾದರೂ ವ್ಯತ್ಯಾಸ ಕಂಡುಬಂದಿದೆಯಾ ಹೇಳಿ. ಇಲ್ಲ ತಾನೇ? ಹಾಗಾದರೆ ನಾವು ನಿಮಗೆ ಇದರಲ್ಲಿನ ಒಂದು ಮಹತ್ವದ ವ್ಯತ್ಯಾಸದ ಬಗ್ಗೆ ಹೇಳಲಿದ್ದೇವೆ. ಪುರುಷರ ಅಂಗಿಯಲ್ಲಿ ಬಟನ್ ಬಲದ ಬದಿಯಲ್ಲಿ ಇದ್ದರೆ, ಮಹಿಳೆಯರ ಅಂಗಿಯಲ್ಲಿ ಬಟನ್ ಎಡದ ಬದಿಯಲ್ಲಿ ಇರುತ್ತದೆ. ಬಟನ್ ಬಗ್ಗೆ ನಿಮಗೆ ಹೇಳಿ ಅಚ್ಚರಿಯಾಯಿತೇ? ಇದರ ಬಗ್ಗೆ ಇನ್ನು ಹಲವಾರು ರೋಚಕ ಸಂಗತಿಗಳಿವೆ ಅದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು, ಮುಂದೆ ಓದಿ…..

ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಹೆಚ್ಚಾಗಿ ದಾಸಿಯರು ಇರುತ್ತಿದ್ದರು. ಅವರು ಬಲದ ಕೈಯನ್ನು ಬಳಸುತ್ತಿದ್ದರು. ಪುರುಷರು ಸಾಮಾನ್ಯ ಬಟ್ಟೆಯನ್ನು ತಾವೇ ಧರಿಸುತ್ತಿದ್ದರು. ಇದು ಪುರುಷರು ಮತ್ತು ಮಹಿಳೆಯರ ಅಂಗಿಯ ಬಟನ್ನ ವ್ಯತ್ಯಾಸಕ್ಕೆ ಪ್ರಮುಖ ಕಾರಣವಾಗಿರಬಹುದು.

ಯುದ್ಧ ಕಾಲದಲ್ಲಿ ಪುರುಷರು ಬಲದ ಕೈಯಲ್ಲಿ ಖಡ್ಗವನ್ನು ಹಿಡಿದುಕೊಳ್ಳುತ್ತಿದ್ದರು ಮತ್ತು ಎಡದ ಕೈಯಿಂದ ಅಂಗಿಯ ಬಟನ್ ತೆಗೆಯುವುದು ಅವರಿಗೆ ತುಂಬಾ ಸುಲಭವಾಗುತ್ತಿತ್ತು. ಮಹಿಳೆಯರು ಎಡದ ಕೈಯಲ್ಲಿ ಮಗುವನ್ನು ಹಿಡಿದುಕೊಳ್ಳುತ್ತಿದ್ದರು. ಇದರಿಂದ ಅವರಿಗೆ ಮೊಲೆ ಹಾಲುಣಿಸಲು ಸುಲಭವಾಗುತ್ತಿತ್ತು.

ಮಹಿಳೆಯರು ಒಂದು ಬದಿಯಲ್ಲಿ ಕುಳಿತುಕೊಂಡರೆ ಪುರುಷರು ಇನ್ನೊಂದು ಬದಿಯಲ್ಲಿ ಕುಳಿತುಕೊಳ್ಳುತ್ತಾ ಇದ್ದರು. ಮಹಿಳೆಯರ ಅಂಗಿಯಲ್ಲಿ ಎಡದ ಬದಿಯಲ್ಲಿ ಇರುತ್ತಿದ್ದ ಬಟನ್ನಿಂದ ಅವರ ಕಡೆಗೆ ಬರುತ್ತಿದ್ದ ಹಿಮಗಾಳಿಯನ್ನು ತಡೆಯಲು ಸಾಧ್ಯವಾಗುತ್ತಿತ್ತು. ಮಹಿಳೆಯರ ಅಂಗಿಯ ಬಟನ್ ಎಡದ ಬದಿಯಲ್ಲಿ ಇರಲು ಇದು ಒಂದು ಕಾರಣವಾಗಿರಬಹುದು.

ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸಮಾನರೆಂದು ಸಾಬೀತು ಮಾಡಲು ಬಯಸುತ್ತಿದ್ದರು. ಪುರುಷರ ಬಟ್ಟೆಯಲ್ಲಿರುವ ಸಮಾನತೆ ಮಹಿಳೆಯರ ಬಟ್ಟೆಯಲ್ಲೂ ಇರುತ್ತಿತ್ತು. ಆದರೆ ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳು ಮಹಿಳೆಯರ ಅಂಗಿಯಲ್ಲಿರುತ್ತಿತ್ತು.

ನೆಪೋಲಿಯನ್ನ ಭಾವಚಿತ್ರಗಳಲ್ಲಿ ಬಲದ ಕೈಯು ಯಾವಾಗಲೂ ಕೋಟ್ನೊಳಗೆ ಇರುತ್ತಿತ್ತಂತೆ. ಇದರಿಂದ ಪುರುಷರ ಅಂಗಿಯ ಬಟನ್ ಬಲದ ಬದಿಯಲ್ಲಿ ಇರಲು ಕಾರಣವಾಗಿರಬಹುದು. ಈಗ ನಿಮಗೆ ಉತ್ತರ ಸಿಕ್ಕಿದೆ ತಾನೇ?

Comments are closed.