ಕರ್ನಾಟಕ

ಪ್ರೌಢ ಮಹಿಳೆಯರ ದೃಷ್ಟಿಯಲ್ಲಿ ಪುರುಷರು ಯಾವತ್ತು ಮೆಚ್ಯೂರಿಟಿ ಕಾಣಲ್ಲ…..

Pinterest LinkedIn Tumblr

married-couple-main

ಮಂಗಳೂರು : ಬಾಲ್ಯದಲ್ಲಿ ಹುಡುಗಾಟ ಮಾಡುವುದು ಸಹಜ, ಆಡುವುದು ಚಿಕ್ಕ ಕಾರಣಕ್ಕೂ ಕಿಸಕ್ಕನೆ ನಕ್ಕುಬಿಡುವುದು ಇವೆಲ್ಲ ಚಿಕ್ಕಂದಿನಲ್ಲಿ ಎಲ್ಲರೂ ಮಾಡುವಂತಹದೆ. ಆದರೆ ಮನುಷ್ಯ ಬೆಳೆದು ದೊಡ್ಡವನಾದಂತೆಲ್ಲ ಅವನಲ್ಲಿ ಅದೇನೋ ಒಂದು ತರಹದ ಪ್ರೌಢತೆ, ಗಂಭೀರತೆ ಬಂದು ಬಿಡುತ್ತದೆ. ಆದರೆ ಅಧ್ಯಯನವೊಂದರ ಪ್ರಕಾರ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಪ್ರೌಢತೆ ಹೊಂದಿರುತ್ತಾರೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಪ್ರೌಢತೆಯ ಮಟ್ಟ ಸ್ವಲ್ಪ ಕಡಿಮೆ ಇರುತ್ತದೆ. ಪ್ರೌಢ ಮಹಿಳೆಯರ ದೃಷ್ಟಿಯಲ್ಲಿ ಪುರುಷರು ಚಿಕ್ಕ ಮಕ್ಕಳಂತೆ ಕಾಣುತ್ತಾರೆ.

ಅಧ್ಯಯನದ ಪ್ರಕಾರ ಪುರುಷರಿಗೆ 43 ವರ್ಷಕ್ಕೆ ಮೆಚ್ಯೂರಿಟಿ ಬರುತ್ತದೆ ಆದರೆ ಮಹಿಳೆಯರಿಗೆ 11 ವರ್ಷ ಮೊದಲೆ ಮೆಚ್ಯೂರಿಟಿ ಬಂದಿರುತ್ತದೆ. ಬ್ರಿಟನ್ನ ನಿಕಲೋಡಿಯನ್ ಯುಕೆ ಅಧ್ಯಯನದ ಪ್ರಕಾರ ಈ ಮಾಹಿತಿ ಹೊರಬಂದಿದೆ . ಮಹಿಳೆಯರು 32 ವರ್ಷದಲ್ಲಿ ಪರಿಪಕ್ವತೆ ಹೊಂದಿರುತ್ತಾರೆ. ಪುರುಷರು ಎಂದಿಗೂ ಬಾಲ್ಯದ ಹುಡುಗಾಟ ಬಿಡೋದಿಲ್ಲ ಇವರಿಗೆ ಮೆಚ್ಯೂರಿಟಿ ಅನ್ನುವುದೆ ಇಲ್ಲ ಎಂದು ಪ್ರತಿ 10 ಮಹಿಳೆಯರಲ್ಲಿ 8 ಜನ ಮಹಿಳೆಯರ ಅಭಿಪ್ರಾಯವಾಗಿತ್ತದೆ ಎಂದು ಅಧ್ಯಯನ ತಿಳಿಸಿದೆ.

ಪುರುಷರಿಗೆ ಫಾಸ್ಟ್ ಫುಡ್ ತಿನ್ನುವದು ಮತ್ತು ವಿಡಿಯೊ ಗೇಮ್ ಆಡುವುದು ಇಷ್ಟವಾಗಿರುತ್ತದೆ. ಇಲ್ಲಿಯೂ ಕೂಡ ಸಣ್ಣ ಮಕ್ಕಳ ತರಹ ಆಡುತ್ತಾರೆ. ಚಿಕ್ಕ ಮಕ್ಕಳು ಜಗಳ ಆಡಿದ ನಂತರ ಮೌನವಾಗಿರುತ್ತಾರೆ ಅದೇ ರೀತಿ ಪುರುಷರು ಕೂಡಾ ಜಗಳದ ನಂತರ ಮೌನವಾಗಿರುತ್ತಾರೆ, ಟ್ರಾಫಿಕ್ ರೂಲ್ಸ್ ಮುರಿಯುವುದು, ಕೊಳಕು ಪದಗಳನ್ನು ಬಳಸಿ ಕಿಸಿಕಿಸಿ ನಗುವುದು, ಇಂತಹದೇ ಹಲವಾರು ಅಭ್ಯಾಸಗಳು ಪುರುಷರಿಗಿರುತ್ತದೆ.. ಇದರಿಂದ ಮಹಿಳೆಯರ ದೃಷ್ಟಿಯಲ್ಲಿ ಪುರುಷರು ಬಾಲಕರಂತೆ ಕಾಣುತ್ತಾರೆ.

Comments are closed.