ಮೊಬೈಲ್ ವಿಕಿರಣದಿಂದ ಬರುವಂತಹ ಮೆದುಳಿನ ಕ್ಯಾನ್ಸರ್ ಮತ್ತು ಇತರ ಹಲವಾರು ರೀತಿಯ ರೋಗಗಳಿಗೆ ಮಕ್ಕಳು ತುತ್ತಾಗುತ್ತಾರೆ. ಅದರಲ್ಲಿ ರಕ್ತದ ಕ್ಯಾನ್ಸರ್ ಕೂಡ ಸೇರಿದೆ. ಆದರೆ ಇಂದು ಮೊಬೈಲ್ ಇಲ್ಲದೆ ಒಂದು ಐದು ನಿಮಿಷ ಕಳೆಯುವುದು ಕಷ್ಟವೆನ್ನುವಂತಾಗಿದೆ.
ಇಂತಹ ಸನ್ನಿವೇಶದಲ್ಲಿ ಮೊಬೈಲ್ ಬಳಕೆ ಮಾಡುವಾಗ ಅದರ ವಿಕಿರಣದಿಂದ ಆಗುವಂತಹ ಸಮಸ್ಯೆಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಇದನ್ನು ಮುಂದೆ ಓದುತ್ತಾ ತಿಳಿಯಿರಿ. ಸಾವಿನ ಕೂಪಕ್ಕೆ ತಳ್ಳುತ್ತಿದೆ, ಮೊಬೈಲ್ ಫೋನ್‌ಗಳ ವಿಕಿರಣ!
ಮೊಬೈಲ್ ಅನ್ನು ಆದಷ್ಟು ದೇಹದಿಂದ ದೂರವಿಡಿ. ಹೆಡ್ ಸೆಟ್ನಿಂದ ಕರೆಯನ್ನು ಸ್ವೀಕರಿಸಿ ಅಥವಾ ಕರೆ ಮಾಡಿ. ಸಂಗೀತ ಕೇಳುವಾಗಲೂ ಹೆಡ್ ಸೆಟ್ ಬಳಸಿ. ಹೆಡ್ ಸೆಟ್ನ್ನು ತಲೆಯಿಂದ ಆದಷ್ಟು ಕೆಳಮಟ್ಟದಲ್ಲಿಡಿ. ಹೆಡ್ ಸೆಟ್ ಬಳಸದೆ ಇದ್ದರೆ ಕರೆ ಸ್ವೀಕರಿಸುವಾಗ ಅಥವಾ ಕರೆ ಮಾಡುವಾಗ ಮೊಬೈಲ್ ಅನ್ನು ತಲೆಯಿಂದ ದೂರವಿಡಲು ಪ್ರಯತ್ನಿಸಿ.
ಮೊಬೈಲ್ನ್ನು ಯಾವತ್ತೂ ನಿಮ್ಮ ತಲೆಗೆ ಒತ್ತಿಕೊಂಡು ಇಡಬೇಡಿ. ನಿಮ್ಮ ತಲೆಗೆ ಹತ್ತಿರವಾದಷ್ಟು ಅದು ಹೆಚ್ಚಿನ ಶಕ್ತಿಯನ್ನು ಹೀರಿಕೊಳ್ಳುವುದು. ಮಾತನಾಡುವಾದ ಸ್ಪೀಕರ್ ಫೋನ್ ಬಳಸಿ. ಇದರಿಂದ ಮೊಬೈಲ್ ಅನ್ನು ನಿಮ್ಮ ದೇಹದಿಂದ ದೂರವಿಡಬಹುದು. ಮನೆಯಲ್ಲಿ ಇರುವಾಗ ಆದಷ್ಟು ಲ್ಯಾಂಡ್ ಲೈನ್ ಫೋನ್ ಅನ್ನು ಬಳಸಿ. ಪೂರ್ತಿ ನೆಟ್ ವರ್ಕ್ ಇರುವಾಗಲೇ ಮೊಬೈಲ್ ಬಳಸಿ. ಕಡಿಮೆ ಇದ್ದರೆ ಅದರಿಂದ ಹೆಚ್ಚಿನ ವಿಕಿರಣ ಹೊರಸೂಸುವುದು. ಹಾಸಿಗೆ ಬಳಿ ಮೊಬೈಲ್ ಇಟ್ಟುಕೊಂಡರೆ ಅಪಾಯ ಗ್ಯಾರೆಂಟಿ..
ಮೊಬೈಲ್ನಲ್ಲಿ ತುಂಬಾ ಕಡಿಮೆ ಮಾತನಾಡಿ. ಕಡಿಮೆ ಮಾತನಾಡಿದಷ್ಟು ವಿಕಿರಣವು ಕಡಿಮೆ ಸೂಸುವುದು. ಇತರರಿಗೆ ನಿಮ್ಮ ಸಂದೇಶಗಳನ್ನು ತಿಳಿಸಲು ಆದಷ್ಟು ಎಸ್ ಎಂಎಸ್ ಬಳಸಿ. ಇದರಿಂದ ಮೊಬೈಲ್ ನಿಮ್ಮ ದೇಹದಿಂದ ದೂರವಿರುತ್ತದೆ ಮತ್ತು ವಿಕಿರಣಕ್ಕೆ ನಿಮ್ಮ ದೇಹವು ಒಡ್ಡಿಕೊಳ್ಳುವುದು ಕಡಿಮೆಯಾಗುತ್ತದೆ.
ಅಂಗಿ ಅಥವಾ ಪ್ಯಾಂಟ್ನ ಕಿಸೆಯಲ್ಲಿ ಮೊಬೈಲ್ ಅನ್ನು ಇಡಬೇಡಿ. ಮೊಬೈಲ್ನಿಂದ ಹೊರಸೂಸುವ ವಿಕಿರಣವು ನಿಮ್ಮ ಹೃದಯ ಮತ್ತು ಫಲವತ್ತತೆ ಮೇಲೆ ಪರಿಣಾಮ ಬೀರಬಹುದು. ಮಕ್ಕಳನ್ನು ಆದಷ್ಟು ಮೊಬೈಲ್ ನಿಂದ ದೂರವಿಡಿ. ಯಾಕೆಂದರೆ ವಿಕಿರಣಗಳು ಬೇಗನೆ ಮಕ್ಕಳ ದೇಹದೊಳಗೆ ಪ್ರವೇಶಿಸುತ್ತದೆ.
ದೇಹದ ಯಾವುದಾದರೂ ಅಂಗದಲ್ಲಿ ಲೋಹ ಅಳವಡಿಸಿಕೊಂಡಿರುವವರು ಆದಷ್ಟು ಮೊಬೈಲ್ನಿಂದ ದೂರವಿರಬೇಕು. ಕೂದಲು ಒದ್ದೆಯಾಗಿರುವಾಗ ಮೊಬೈಲ್ನಲ್ಲಿ ಮಾತನಾಡಲು ಹೋಗಬೇಡಿ. ಯಾಕೆಂದರೆ ನೀರು ಮತ್ತು ಲೋಹವು ವಿಕಿರಣಗಳನ್ನು ಬೇಗನೆ ಸೆಳೆಯುತ್ತದೆ.

Comments are closed.