ಮಂಗಳೂರು/ಮುಂಬಯಿ,25: ರಾಷ್ಟ್ರಪ್ರಶಸ್ತಿ ವಿಜೇತ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರು ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾಗುವ ಇಂಗಿತ ವ್ಯಕ್ತಪಡಿಸಿ, ಅಚ್ಚರಿ ಮೂಡಿಸಿದ್ದಾರೆ.
ವಸ್ತ್ರ ವಿನ್ಯಾಸಕ ಸ್ನೇಹಿತ ಮಾನವ್ ಗಂಗ್ವಾನಿ ಅವರ ಜತೆಗೂಡಿ ಮಾಧ್ಯಮದವರೊಂದಿಗೆ ಮಾತನಾಡಿದ ಕಂಗನಾ, “ಮಾನ್ ಹಾಗೂ ನಾನು ನನ್ನ ವಿವಾಹದ ಬಗ್ಗೆ ಮಾತನಾಡುತ್ತಿದ್ದೆವು. ಮೊದಲ ವಿವಾಹಕ್ಕೆ ನೀನು ವಿನ್ಯಾಸಗೊಳಿಸುವ ಉಡುಪನ್ನೇ ಧರಿಸುತ್ತೇನೆ ಎಂದು ಅವರಿಗೆ ತಿಳಿಸಿದ್ದೇನೆ’ ಎಂದು ತಿಳಿಸಿದರು.
ಒಂದಕ್ಕಿಂತ ಹೆಚ್ಚು ವಿವಾಹವಾಗುತ್ತೀರಾ ಎಂದು ಈ ವೇಳೆ ಸುದ್ದಿಗಾರರು ಅಚ್ಚರಿಯಿಂದ ಪ್ರಶ್ನಿಸಿದಾಗ, “ಯಾಕಿಲ್ಲ? ಒಂದು ಮದುವೆಯಾದ ಮೇಲೆ ಮತ್ತಷ್ಟು ನಡೆಯಬಹುದು. ವೈವಾಹಿಕ ಜೀವನದಲ್ಲಿ ಎಲ್ಲವೂ ಸರಿಹೋಗದಿದ್ದರೆ ಮತ್ತೂಂದು ವಿವಾಹವಾಗುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಹೇಳಿದರು.
29 ವರ್ಷದ ಕಂಗನಾ ಕೆಲ ತಿಂಗಳ ಹಿಂದೆ ನಟ ಹೃತಿಕ್ ರೋಷನ್ ಅವರು ತಮ್ಮ ಮಾಜಿ ಪ್ರಿಯಕರ ಎಂದು ಹೇಳಿ ವಿವಾದಕ್ಕೀಡಾಗಿದ್ದರು. ಈ ಸಂಬಂಧ ಹೃತಿಕ್ ಕಾನೂನು ಹೋರಾಟವನ್ನೇ ಆರಂಭಿಸಿದ್ದರು.

Comments are closed.