ಮಂಗಳೂರು/ ಬೀಜಿಂಗ್ ಜು.25 : ಕಾರಿನಿಂದ ಇಳಿದು ನೀವು ನಿಮ್ಮ ಗೆಳೆಯ/ಗೆಳತಿಯೊಡನೆ ಮಾತನಾಡುತ್ತಿರುತ್ತೀರಿ, ಅಷ್ಟರಲ್ಲೇ ಹಿಂದಿನಿಂದ ಹುಲಿಯೊಂದು ದಾಳಿ ನಡೆಸಿ ದರ ದರನೇ ಎಳೆದೊಯ್ದರೆ? ಅಬ್ಬಾ…! ಹೀಗಾಗಲು ಸಾಧ್ಯವಾ? ಕೆಟ್ಟ ಕನಸಾಗಿರಬಹುದಷ್ಟೇ ಅಂತದುಕೊಳ್ಳುತ್ತೇವೆ. ಆದರೆ ಇಂತಹುದೇ ಭಯಾನಕ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ಹುಲಿಗೆ ಆಹಾರವಾಗಿದ್ದಲ್ಲದೆ, ಆಕೆಯನ್ನು ಕಾಪಾಡಲು ತೆರಳಿದ ಯುವಕನೂ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಎಲ್ಲಾ ದೃಶ್ಯಾವಳಿಗಳು ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದ್ದು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.
ಚೀನಾದ ಬೀಜಿಂಗ್ ಸಫಾರಿ ಪಾರ್ಕ್’ನ್ನು ವೀಕ್ಷಿಸಲು ಗೆಳೆಯರ ತಂಡವೊಂದು ಬಂದಿದ್ದು, ತಂಡದಲ್ಲಿದ್ದ ಮಹಿಳೆ ಕಾರಿನಿಂದ ಇಳಿದು ತನ್ನ ಗೆಳೆಯರೊಂದಿಗೆ ಮಾತನಾಡುತ್ತಿರುತ್ತಾಳೆ. ಅಷ್ಟರಲ್ಲೇ ಹಿಂದಿನಿಂದ ಬಂದ ಹುಲಿಯೊಂದು ಕ್ಷಣ ಮಾತ್ರದಲ್ಲಿ ಆಕೆಯನ್ನು ಎಳೆದೊಯ್ದು ತನ್ನ ಆಹಾರವನ್ನಾಗಿಸುತ್ತದೆ. ಈ ವೇಳೆ ಆಕೆಯನ್ನು ಕಾಪಾಡಲು ಇತರರು ಯತ್ನಿಸಿದ್ದು, ಈ ಪ್ರಯತ್ನದಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬೀಜಿಂಗ್ ಸಫಾರಿ ಪಾರ್ಕ್ ಸಿಂಹಗಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿ ವನ್ಯಜೀವಿಗಳು ಸ್ವತಂತ್ರವಾಗಿ ವಿಹರಿಸುತ್ತಿರುತ್ತವೆ. ಸದ್ಯ ಈ ಭಯಾನಕ ದೃಶ್ಯ ಇಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವೈರಲ್ ಆಗುತ್ತಿವೆ.
Comments are closed.