ಮಂಗಳೂರು/ಮುಂಬಯಿ .25 : ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಬಿಗ್ ರಿಲೀಫ್ ಎಂಬಂತೆ ಎರಡು ಕೃಷ್ಣ ಮೃಗ ಬೇಟೆಯಾಡಿದ್ದ ಪ್ರಕರಣಗಳಲ್ಲಿ ನಿರ್ದೋಷಿ ಎಂದು ರಾಜಸ್ಥಾನದ ಹೈಕೋರ್ಟ್ ಸೋಮವಾರ ತೀರ್ಪು ಪ್ರಕಟಿಸಿದೆ.
ಮೇ ತಿಂಗಳಲ್ಲಿ ಈ ಪ್ರಕರಣದ ವಿಚಾರಣೆ ಮುಗಿದಿದ್ದು, ಅಂತಿಮ ತೀರ್ಪನ್ನು ಕೋರ್ಟ್ ಕಾಯ್ದಿರಿಸಿತ್ತು.
1998ರಲ್ಲಿ ಜೋಧಪುರದಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣದ ವೇಳೆ ಕಾನ್ಕಾನಿ ಎಂಬ ಗ್ರಾಮದ ಬಳಿ ಎರಡು ಕೃಷ್ಣಮೃಗಳನ್ನು ಸಲ್ಮಾನ್ ಹತ್ಯೆಮಾಡಿದ್ದ ಪ್ರಕರಣ ಇದಾಗಿದ್ದು, ಇದರಲ್ಲಿ ಸಲ್ಮಾನ್ ಸೇರಿದಂತೆ ಸೈಫ್ ಅಲಿಖಾನ್, ನಿಲಂ, ಟಬು ಹಾಗೂ ಸೋನಾಲಿ ಬೇಂದ್ರೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಖಾನ್ ರಾಜಸ್ಥಾನ್ ಹೈಕೋರ್ಟ್ ಮೊರೆ ಹೋಗಿದ್ದರು.
ಕೆಳ ನ್ಯಾಯಾಲಯ ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಗೆ 5 ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು. ಖಾನ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಪೂರ್ಣಗೊಂಡ ಬಳಿಕ ಬೆನಿಫಿಟ್ ಆಫ್ ಡೌಟ್ ಮೇಲೆ ಖುಲಾಸೆಗೊಳಿಸಿ ತೀರ್ಪು ನೀಡಿದೆ.
Comments are closed.