ಮಂಗಳೂರು /ಬೆಂಗಳೂರು,ಜು.25: : ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಸಾರಿಗೆ ನೌಕರರು ಅನಿರ್ಧಿಷ್ಟವಾಧಿ ಮುಷ್ಕರ ಹಮ್ಮಿಕೊಂಡಿದ್ದಾರೆ. ಹೀಗಾಗಿ ಮಧ್ಯರಾತ್ರಿಯಿಂದಲೇ ಬಸ್ ಗಳು ರೋಡಿಗಿಳಿದಿಲ್ಲ. ಇದರಿಂದ ಸಾರಿಗೆ ಸಂಸ್ಥೆಗೆ ಎಷ್ಟು ನಷ್ಟ ಆಗುತ್ತದೆ ಎನ್ನುವುದನ್ನು ನೋಡುವುದಾದರೆ.
ನಿಗಮ ಬಸ್ ಸಂಖ್ಯೆ ನಿತ್ಯದ ಆದಾಯ, ಪ್ರಯಾಣಿಕರ ಸಂಖ್ಯೆ.
ಬಿಎಂಟಿಸಿ 6,700 , 4.5 ಕೋಟಿ ರೂ, 51 ಲಕ್ಷ
ಕೆಎಸ್ಆರ್ಟಿಸಿ 8,300, 8.5 ಕೊಟಿ ರೂ, 29 ಲಕ್ಷ
ವಾಯುವ್ಯ ಸಾರಿಗೆ 4,700. 5 ಕೋಟಿ ರೂ 22 ಲಕ್ಷ
ಈಶಾನ್ಯ ಸಾರಿಗೆ 4,300. 3 ಕೋಟಿ ರೂ. 12 ಲಕ್ಷ
ಒಟ್ಟಾರೆಯಾಗಿ ಹೇಳಬೇಕೆಂದರೆ ಬಸ್ ನೌಕರರ ಮುಷ್ಕರದಿಂದ ಒಂದು ದಿನದಲ್ಲಿ 24,000 ಬಸ್ಗಳು ಸ್ಥಗಿತಗೊಳ್ಳುತ್ತವೆ. ಇದರಿಂದಾಗಿ 87 ಲಕ್ಷ ಜನರು ಸಮಸ್ಯೆ ಅನುಭವಿಸಲಿದ್ದಾರೆ. ಇಷ್ಟೇ ಅಲ್ಲದೆ ಇವೆಲ್ಲದರಿಂದ ಸಾರಿಗೆ ಸಂಸ್ಥೆಗೆ ದಿನವೊಂದರಲ್ಲಿ 21 ಕೋಟಿ ರೂಪಾಯಿ ನಷ್ಟವಾಗಲಿದೆ.

Comments are closed.