
ಹುಣಸೂರು: ಕಳೆದ ಎರಡು ತಿಂಗಳಿನಿಂದ ಗ್ರಾಮಸ್ಥರಿಗೆ ತಲೆ ನೋವಾಗಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದ್ದರಿಂದ ಭಯಬೀತರಾಗಿದ್ದ ಕೊತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳ ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.
ತಾಲ್ಲೂಕಿನ ಕೊತ್ತೇಗಾಲ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಚಿರತೆಯೊಂದು ಎರಡು ತಿಂಗಳಿಂದ ಸಾಕು ಪ್ರಾಣಿಗಳನ್ನು ತಿಂದು ಗ್ರಾಮಸ್ಥರನ್ನು ಬಯದ ವಾತಾವರಣದಲ್ಲಿ ಇರುವಂತೆ ಮುಳುಗಿಸಿತ್ತು ಮಕ್ಕಳು ಶಾಲಾ-ಕಾಲೇಜಿಗೆ ಹೋಗಲು ಹೆದರುತ್ತಿದ್ದರಿಂದ ಗ್ರಾ.ಪಂ ಸದಸ್ಯ ಸಂಪತ್ ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದರು.
ಅರಣ್ಯಾಧಿಕಾರಿಗಳು ಗ್ರಾಮದ ಹೊರವಲಯದಲ್ಲಿರುವ ಸಂಪತ್ ತೋಟದಲ್ಲಿ ಬೋನ್ ಇಟ್ಟು ಗುರುವಾರ ರಾತ್ರಿ ಬೋನಿನಲ್ಲಿ ಕುರಿಯನ್ನು ಕಟ್ಟಲಾಗಿತ್ತು. ಶುಕ್ರವಾರ ಬೆಳಿಗಿನ ಜಾವ ಕುರಿ ತಿನ್ನಲು ಬಂದ ಚಿರತೆ ಅರಣ್ಯ ಇಲಾಖೆ ಇಟ್ಟ ಬೋನಿನಲ್ಲಿ ಸೆರೆಯಾಗಿದೆ.
ತಾಲೂಕಿನ ತಿಪ್ಲಾಪುರ ಗ್ರಾಮದಲ್ಲಿ ಹಸುವೊಂದರ ಮೇಲೆ ದಾಳಿ ಮಾಡಿ ಕೊಂದು ಹಾಕಿದನ್ನು ಇಲ್ಲಿ ಸ್ಮರಿಸಬಹುದು. ಬೋನಿನಲ್ಲಿ ಬಂದಿಯಾಗಿದ್ದ ಚಿರತೆ ನೋಡಲು ಸುತ್ತಮುತ್ತಲ ಗ್ರಾಮಸ್ಥರು ಜಮಾಯಿಸಿದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲು ಕೊಂಡ್ಯೋದರು.
Comments are closed.