ನರಗುಂದ: ಮಹದಾಯಿ ಹೋರಾಟ ವೇದಿಕೆ ಹಾಗೂ ವಿವಿಧ ರೈತಪರ ಸಂಘಟನೆಗಳು ನರಗುಂದ ಪಟ್ಟಣದಲ್ಲಿ ಗುರುವಾರ ರೈತ ಹುತಾತ್ಮ ದಿನ ಆಚರಿಸುತ್ತಿವೆ.
ಹುತಾತ್ಮ ರೈತರಾದ ವೀರಪ್ಪ ಬಸಪ್ಪ ಕಡಲಿಕೊಪ್ಪ ಮತ್ತು ರಾಮಣ್ಣ ತಹಶೀಲ್ದಾರ್ ಅವರ ಭಾವಚಿತ್ರಕ್ಕೆ ಅವರ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು.
36 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಇನ್ನೂ ನೀರು ಬಾರದಿರುವ ಬಗ್ಗೆ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುತ್ತಮುತ್ತಲಿನ ಹಳ್ಳಿಗಳಿಂದ ರೈತರು ತಂಡೋಪತಂಡವಾಗಿ ನರಗುಂದಕ್ಕೆ ಬರುತ್ತಿದ್ದಾರೆ. ಕೆಲ ಗ್ರಾಮಗಳಲ್ಲಿ ರೈತರು ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ: ಮಹದಾಯಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾದರೆ ವಿಷ ಕುಡಿದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಯಾವಗಲ್ ಗ್ರಾಮದ ರೈತರು ಹೇಳಿದ್ದಾರೆ.
Comments are closed.