ಕರ್ನಾಟಕ

ಈ ವರ್ಷ ಮಣ್ಣಿನ ಗಣಪನಿಗೆ ಒಲವು

Pinterest LinkedIn Tumblr

clay-ganesha-2-1bwಬೆಂಗಳೂರು, ಜು ೨೦- ಬರುವ ಗಣೇಶ ಚತುರ್ಥಿ ಹಬ್ಬದಲ್ಲಿ ಮಣ್ಣಿನ, ಪುಟ್ಟ, ವಿಷಬಣ್ಣ ರಹಿತ ಗಣೇಶ ಮೂರ್ತಿಗಳನ್ನೇ ಸ್ಥಾಪಿಸಬೇಕು ಮತ್ತು ಹಬ್ಬವನ್ನು ಸಂಪೂರ್ಣವಾಗಿ ಪರಿಸರ ಸ್ನೇಹಿ ವಿಧಾನದಲ್ಲಿ ಆಚರಿಸಬೇಕು ಎಂಬ ಆದೇಶವನ್ನು ಹೊರಡಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಧರಿಸಿದೆ.

ಪ್ಲ್ಯಾಸ್ಟರ್ ಆಫ್ ಪ್ಯಾರೀಸ್ ಹಾಗೂ ರಾಸಾಯನಿಕ ವಸ್ತುಗಳಿಂದ ಮಾಡಿದ ಗಣೇಶ ಮೂರ್ತಿಯನ್ನು ಸಂಪೂರ್ಣವಾಗಿ ನಿಷೇಧಿಸಲು ಮಂಡಳಿ ನಿರ್ಧರಿಸಿದೆ.
ಕಳದೆ ವರ್ಷ ಮಣ್ಣಿನಲ್ಲಿ ಮಾಡಿದ ಪುಟ್ಟ ಗಣೇಶನಿಗೆ ಗಿಡಮರಗಳಿಂದಲೇ ತೆಗೆದ ಸಹಜ ಬಣ್ಣವನ್ನು ಲೇಪಿಸಿದ ಮುದ್ದು ಗಣಪನನ್ನು ರೂಪಿಸುವ ಮೂಲಕ ‘ ಪರಿಸರ ಸ್ನೇಹಿ ಗಣೇ ಹಬ್ಬ ಆಚರಣೆ ಕಾರ್ಯಾಗಾರ’ ನಡೆಸಿಕೊಟ್ಟು ಅರಿವು ಮಾಡಿಸಲಾಗಿತ್ತು, ಆದರೆ ಈ ಬಾರಿ ವಿಷ ಬಣ್ಣ ರಹಿತ ಗಣೇಶ ಮೂರ್ತಿಗೆ ಸಂಪೂರ್ಣವಾಗಿ ನಿಷೇಧಿಸಿ ಮಣ್ಣಿನ ಮೂರ್ತಿ ಮಾತ್ರ ಪ್ರಾಮುಖ್ಯತೆ ನೀಡಲು ನಿರ್ಧರಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಅವರು ತಿಳಿಸಿದ್ದಾರೆ.

‘ಮಣ್ಣಿನಿಂದಲೇ ಮಾಡಿದ ಪುಟ್ಟ ಗಣಪನನ್ನು ಪೂಜಿಸಿ ಆನಂದಿಸಿ, ಪರಿಸರಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸಿ’ ಎಂದು ಕರೆ ಕೊಡುವ ಮೂಲಕ ಸಾಧ್ಯವಿದ್ದಷ್ಟೂ ಮಣ್ಣಿನ, ಚಿಕ್ಕ ಗಣಪನನ್ನೇ ಬಳಸಿ, ಪ್ಲ್ಯಾಸ್ಟರ್ ಆಫ್ ಪ್ಯಾರೀಸ್ ರೂಪಿತ ಗಣಪ ಬೇಡ. ಬಣ್ಣ ಬೇಕೇ ಬೇಕು ಎಂದಿದ್ದರೆ ನಿಸರ್ಗದತ್ತ ಬಣ್ಣ ಬಳಸಲು ಸಲಹೆ ನೀಡಲಾಗಿದೆ. ಪ್ಲ್ಯಾಸ್ಟಿಕ್ ಅಲಂಕಾರವಿಲ್ಲದೇ, ಪಟಾಕಿ ಸುಟ್ಟು ಕಸ ಮಾಡದೇ, ದೊಡ್ಡ ಗಣಪ ಮೂರ್ತಿಗಳನ್ನು ಮರುಬಳಕೆ ಮಾಡುವುದರಿಂದ ಪರಿಸರಕ್ಕೆ ಆಗುವ ಅನೇಕ ಹಾನಿಯನ್ನು ತಪ್ಪಿಸಬಹುದಾಗಿದೆ.

ಕೃತಕ ಬಣ್ಣಗಳಲ್ಲಿ ಇರುವ ಸೀಸ ಇಡೀ ಪರಿಸರಕ್ಕೆ ಅಪಾಯವಾಗಿದೆ, ಹಾಗಾಗಿ ಸೆಕ್ಸ್‌ನ್ ೩೩(ಅ) ಆಫ್ ದಿ ವಾಟರ್ ಆಕ್ಟ್ ಕಾಯ್ದೆ ಪ್ರಕಾರ ಪ್ಲ್ಯಾಸ್ಟರ್ ಆಫ್ ಪ್ಯಾರೀಸ್ ಹಾಗೂ ವಿಷಯುಕ್ತ ಗಣೇಶ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಮಂಡಳಿ ಮುಂದಾಗಿದೆ. ಒಂದಡಿ ಕೃತಕ ಬಣ್ಣಗಳ ಗಣಪನ ಮೇಲ್ಮೈ ಮೇಲೆ ೧೦ರಿಂದ ೨೦ ಗ್ರಾಂ ಸೀಸ ಇರುತ್ತದೆ. ಸ್ಯಾಂಕಿ ಕೆರೆಯಲ್ಲಿ ಇಂಥ ಹತ್ತಿಪ್ಪತ್ತು ಸಾವಿರ ಗಣಪಗಳನ್ನು ಮುಳುಗಿಸಿದರೆ ನೀರಿಗೆ ಸೇರುವ ಸೀಸ ಪ್ರಮಾಣವನ್ನು ಅಂದಾಜಿಸಲು ಅಸಾಧ್ಯ, ಈ ಸಂಬಂಧ ಈಗಾಗಲೇ ಎಲ್ಲಾ ಸಂಘ ಸಂಘಟನೆಗಳಿಗೆ ನೋಟಿಸ್‌ನ್ನು ನೀಡಲಾಗಿದ್ದು, ಹೊರ ರಾಜ್ಯದಿಂದ ಬರುವ ಹಾಗೂ ಮೂರ್ತಿ ತಯಾರಿಸುವವರಿಗೆ ಬಣ್ಣದ ಗಣೇಶ ಮಾರಾಟ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಎಲ್ಲೆಡೆ ನಡೆಸಲು ತಿರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು. ಇದಕ್ಕೆ ಬಿಬಿಎಂಪಿ , ಪೋಲಿಸರಿಗೂ ಸಹಕಾರ ನೀಡಲು ಸೂಚಿಸಲಾಗಿದ್ದು, ೨೦೧೦ರಿಂದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ಸ್ನೇಹಿ ಗಣೇಶ ಹಬ್ಬಕ್ಕಾಗಿ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿದ್ದು ಎಲ್ಲರು ಇದನ್ನು ಪಾಲಿಸಲು ಕ್ರಮ ಕೈಗೊಂಡು ಪರಿಸರ ರಕ್ಷಣೆಗೆ ಮುಂದಾಗಿ ಎಂದೂ ಅವರು ಸಲಹೆ ನೀಡಿದ್ದಾರೆ.

Comments are closed.