ಬೆಂಗಳೂರು, ಜು. ೧೮ – ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ ಅಪಹರಣ ಆಗುವ ಮುನ್ನವೇ ಇಲಾಖೆಯ ಕೆಲವು ಅಧಿಕಾರಿಗಳಿಗೆ ಗೊತ್ತಿತ್ತು ಎಂದು ಸಿಐಡಿ ಪ್ರಾಥಮಿಕ ವರದಿಯಿಂದ ಬಹಿರಂಗಗೊಂಡಿದೆ. ಅಲ್ಲದೇ ಕಿಡ್ನಾಪ್ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಶಾಮೀಲು ಪ್ರಕರಣ ದಾಖಲಾಗುವ ಮುನ್ನ ಈ ವಿಷಯ ಶಾಸಕ ಸಿ.ಟಿ. ರವಿ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಅವರಿಗೆ ಗೊತ್ತಿತ್ತು ಎನ್ನುವ ಅಂಶವೂ ಬೆಳಕಿಗೆ ಬಂದಿದೆ.
ಕಲ್ಲಪ್ಪ ಹಂಡಿಭಾಗ್ ಹಣ ಮಾಡುತ್ತಿರಲಿಲ್ಲ. ಹಣ ಮಾಡುತ್ತಿದ್ದ ಅಧಿಕಾರಿಗಳನ್ನು ಸಹಿಸುತ್ತಿರಲಿಲ್ಲ. ಇದೇ ಕಾರಣಕ್ಕಾಗಿ ಜೂ. 27 ರಂದು ನಡೆದ ಜೂಜು ಅಡ್ಡೆಯ ಪ್ರಕರಣದ ಪ್ರಮುಖ ಸಾಕ್ಷಿ ಪ್ರವೀಣ್ ಖಾಂಡ್ಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕರೆ ಮಾಡಿ ಜೂಜು ಅಡ್ಡೆಯ ಮೇಲೆ ದಾಳಿ ಮಾಡಲು ಕಲ್ಲಪ್ಪ ಅವರನ್ನೇ ಕಳುಹಿಸಿ ಎಂದಿದ್ದ ಅಂಶವೂ ಬೆಳಕಿಗೆ ಬಂದಿದೆ.
ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಗ್ರಾಮಾಂತರ ಪಿಎಸ್‌ಐ ರಾಕೇಶ್ ದಾಳಿ ಮಾಡಿ ವಶಪಡಿಸಿಕೊಂಡ 19 ಲಕ್ಷ ರೂ.ಯಲ್ಲಿ ಹೆಸರಿಗೆ ತೋರಿಸಿದ್ದುದು 3 ಲಕ್ಷ ಮಾತ್ರ. ಪ್ರವೀಣ್ ಖಾಂಡ್ಯ, ಕಲ್ಲಪ್ಪ ಹಂಡಿಭಾಗ್‌ಗಿಂತ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಜೊತೆ ಸಂಪರ್ಕದಲ್ಲಿದ್ದ ಅಂಶ ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ
Comments are closed.