ಕರ್ನಾಟಕ

ಕೇವಲ ಎರಡು ಗಂಟೆಗಳಲ್ಲಿ `ಕಬಾಲಿ’ ಟಿಕೆಟ್ ಮಾರಾಟ

Pinterest LinkedIn Tumblr

kabali-759ಬೆಂಗಳೂರು, ಜ. ೧೮ – ದಕ್ಷಿಣ ಭಾರತದ ಮೇರುನಟ ರಜನಿಕಾಂತ್ ಅಭಿನಯದ `ಕಬಾಲಿ’ ಚಿತ್ರದ ಇ – ಟಿಕೆಟ್ ಕೇವಲ ಎರಡೇ ಗಂಟೆಗಳಲ್ಲಿ ಮಾರಾಟವಾಗಿ ಹೊಸ ದಾಖಲೆ ಬರೆದಿದೆ.

`ಕಬಾಲಿ’ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಬಿಡುಗಡೆಗೆ ಐದು ದಿನಕ್ಕೂ ಮುಂಚೆಯೇ ಈ ಟಿಕೆಟ್‌ಗಳು ಮಾರಾಟವಾಗಿವೆ.

ವಿಶ್ವದಾದ್ಯಂತ ಬರುವ ಜುಲೈ 22ಕ್ಕೆ ತೆರೆ ಕಾಣಲಿರುವ `ಕಬಾಲಿ’ ಚಿತ್ರ ಅಮೆರಿಕದಲ್ಲಿಯೇ 400 ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿರುವುದು ಗಮನಾರ್ಹ.

ಚಿತ್ರದ ಮುಂಗಡ ಕಾಯ್ದಿರಿಸುವಿಕೆ ಶುರುವಾಗಿರುವ ಹಿನ್ನೆಲೆಯಲ್ಲಿ ಇ-ಟಿಕೆಟ್‌ಗಳು 2 ಗಂಟೆಯಲ್ಲಿ ಸಂಪೂರ್ಣವಾಗಿ ಮಾರಾಟವಾಗಿವೆ.

ಆರಂಭದಿಂದಲೂ ಅಭಿಮಾನಿಗಳಲ್ಲಿ ತುಕೂಹಲ ಮೂಡಿಸಿರುವ `ಕಬಾಲಿ’ ಚಿತ್ರದಲ್ಲಿ ರಜನಿಕಾಂತ್ ಅವರು ಬಹುವರ್ಷಗಳ ನಂತರ ವಿಲನ್ ಪಾತ್ರ ನಿರ್ವಹಿಸಿದ್ದಾರೆ. ಜೊತೆಗೆ ಕನ್ನಡಿಗ ಕಿಶೋರ್ ಕೂಡ ಅಭಿನಯಿಸಿರುವುದು ಹೆಮ್ಮೆಯ ವಿಚಾರ.

ಇನ್ನು ಬೆಂಗಳೂರಿನ ಊರ್ವಶಿ ಚಲನಚಿತ್ರ ಮಂದಿರದಲ್ಲೂ ಅಭಿಮಾನಿಗಳು ಮುಗಿ ಬಿದ್ದು ಟಿಕೆಟ್ ಖರೀದಿಸಿರುವ ಹಿನ್ನೆಲೆಯಲ್ಲಿ ಬಿಡುಗಡೆಗೂ ಮುನ್ನ ಟಿಕೆಟ್ ಮಾರಾಟವಾಗಿವೆ.

ಸಾರ್ವತ್ರಿಕ ರಜೆ

`ಕಬಾಲಿ’ ಚಿತ್ರ ಬಿಡುಗಡೆ ದಿನದಂದು ಚೆನ್ನೈನ ಕಾರ್ಪೊರೇಟ್ ಸಂಸ್ಥೆಯೊಂದು ಸಾರ್ವತ್ರಿಕ ರಜೆ ಘೋಷಿಸಿದೆ.

ಚೆನ್ನೈನ ಪೈಂಡಸ್ ಇಂಡಿಯಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಾಕಷ್ಟು ಸಿಬ್ಬಂದಿಗಳು ಜುಲೈ 22 `ಕಬಾಲಿ’ ಚಿತ್ರ ಬಿಡುಗಡೆಯಾಗುತ್ತಿದ್ದು, ರಜೆ ನೀಡುವಂತೆ ಅರ್ಜಿ ಸಲ್ಲಿಸಿದ ಕಾರಣ ಇಡೀ ಸಂಸ್ಥೆಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ತಿಳಿಸಿದ್ದಾರೆ.

ಚೆನ್ನೈನ ಕೊಟ್ಟಿವಕ್ಕಂನಲ್ಲಿರುವ ಪೈಂಡಸ್ ಡಾಟಾ ಪ್ರೊಸೆಸಿಂಗ್ ಸಂಸ್ಥೆ ರಜೆ ಜೊತೆಗೆ ಉದ್ಯೋಗಿಗಳಿಗೆ `ಕಬಾಲಿ’ ಚಿತ್ರದ ಟಿಕೆಟ್ ಕೂಡ ಕೊಡಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

Comments are closed.