ಕರ್ನಾಟಕ

ಗೋಲ್ಡನ್​ ಮ್ಯಾನ್ ನ ದಾರುಣ ಹತ್ಯೆ.

Pinterest LinkedIn Tumblr

golden_man_muder

ಪುಣೆ ಜು.15:  ಬಂಗಾರದ ಮನುಷ್ಯನೆಂದೇ ಖ್ಯಾತಿಯಾಗಿದ್ದ ಪುಣೆಯ ದತ್ತಾತ್ರೆಯೆ ಫುಗಾ ದುರುಂತ ಅಂತ್ಯ ಕಂಡಿದ್ದಾನೆ. ಮುಂಜಾನೆ ಸುಮಾರ 3.30ರ ವೇಳೆಗೆ ಪುಣೆ ಬಳಿಯ ದಿಗಿಯಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.

ಸುಮಾರು ೨೦ ಜನ ಅಂಗರಕ್ಷರ ಜೊತೆ ಒಡಾಡುತ್ತಿರುವ ಈ ಬಾಬಾ ಹತ್ಯೆ ಸಮಯದಲ್ಲಿ ಒಬ್ಬಂಟಿರಾಗಿದ್ದರು ಎಂದು ತಿಳಿದುಬಂದಿದೆ . ಚಿಟ್ ಫಂಡ್ ಮಾಲೀಕ ಹಾಗೂ ಬ್ಯುಸಿನೆಸ್ಮನ್ ಆಗಿ ಗುರುತಿಸಿಕೊಂಡಿದ್ದ ದತ್ತಾತ್ರೆಯ ಫುಗಾ ತನ್ನ ಮೈಮೇಲೆ ಸುಮಾರು 1.2 ಕೋಟಿ ಬೆಲೆ ಬಾಳುವ ಚಿನ್ನಾಭರಣದ ಶರ್ಟ್ ಸೇರಿ ಇತರೆ ಅಭರಣಗಳನ್ನ ತೊಡುವ ಮೂಲಕ ಗೋಲ್ಡನ್ ಮ್ಯಾನ್ ಎಂದೇ ಖ್ಯಾತಿಯಾಗಿದ್ದ.

ದತ್ತಾತ್ರೇಯ ಹತ್ಯೆಗೆ ಚಿಟ್ಫಂಡ್ ವ್ಯವಹಾರ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ದತ್ತಾತ್ರೇಯ ಹತ್ಯೆಗೆ ಸಂಬಂಧಿಸಿದಂತೆ ಪುಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Comments are closed.