ಕರ್ನಾಟಕ

ಕಮಲ್‌ ಹಾಸನ್ ಆಸ್ಪತ್ರೆಗೆ ದಾಖಲು

Pinterest LinkedIn Tumblr

kamal-haasan-2

ಚೆನ್ನೈ : ಮೆಟ್ಟಿಲಿನಿಂದ ಇಳಿಯುವಾಗ ಜಾರಿ ಬಿದ್ದು ನಟ ಕಮಲ್‌ಹಾಸನ್ ಅವರ ಕಾಲಿನ ಮೂಳೆ ಮುರಿದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಮಲ್ ಅವರ ಕಾಲಿಗೆ ಹಾನಿಯಾಗಿರುವುದರಿಂದ ಅವರು ಲಂಡನ್‌–ಭಾರತೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿಲ್ಲ. ಅವರು ಚಿತ್ರೋತ್ಸವದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆಯಬೇಕಿತ್ತು.

ಸದ್ಯ ಕಮಲ್ ಅವರು ‘ಸಬಾಶ್ ನಾಯ್ಡು’ ಸಿನಿಮಾ ನಿರ್ದೇಶನ ಮಾಡಿತ್ತಿದ್ದು, ಅದರಲ್ಲಿ ಪುತ್ರಿ ಶ್ರುತಿ ಹಾಸನ್ ಅವರೊಂದಿಗೆ ನಟಿಸಿದ್ದಾರೆ.

Comments are closed.