ಕರ್ನಾಟಕ

ಕುಡಿತ ಬಿಟ್ಟಿರುವುದಕ್ಕೆ ಬೇಸರವಿದೆ, ಮುಂದೆ ಕುಡಿದ್ರೂ ಕುಡಿಬಹುದು: ಅಬಕಾರಿ ಸಚಿವ

Pinterest LinkedIn Tumblr

drinkಬಾಗಲಕೋಟೆ: ಕುಡಿತ ಬಿಟ್ಟಿರುವುದು ನನಗೆ ಬೇಸರ ತರಿಸಿದೆ, ಮುಂದೆ ಕುಡಿದರು ಕುಡಿಯಬಹುದು ಎಂದು ಹೇಳುವ ಮೂಲಕ ಅಬಕಾರಿ ಸಚಿವ ಹೆಚ್.ವೈ. ಮೇಟಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನ್ನಾಡುತ್ತಿದ್ದ ಅವರು, ಅಬಕಾರಿ ಸಚಿವ ಸ್ಥಾನ ನೀಡಿರುವುದಕ್ಕೆ ಬೇಸರವಿದೆ. ನಾನೀಗ ಕುಡಿಯೋದನ್ನು ಬಿಟ್ಟಿದ್ದೇನೆ. ಅದಕ್ಕೂ ನನಗೆ ಬೇಸರವಾಗಿದೆ. ಆದರೆ ಮುಂದೆ ಕುಡಿದರೂ ಕುಡಿಯಬಹುದು ಎಂದು ನಗುತ್ತ ಹೇಳಿದರು.

ವರದಿಗಾರರ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ಕುಡಿಯುವುದು ಬಿಡುವುದು ಅವರವರ ವೈಯಕ್ತಿಕ ವಿಚಾರ. ಅಬಕಾರಿ ಖಾತೆ ಉತ್ತಮ ಖಾತೆಯಾಗಿದ್ದು, ವಿಪುಲ ಆದಾಯವನ್ನು ತರುತ್ತದೆ ಎಂದು ತಮ್ಮ ಖಾತೆ ಬಗ್ಗೆ ಮೆಚ್ಚುಗೆಯನ್ನು ಸಹ ವ್ಯಕ್ತ ಪಡಿಸಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಬಾಗಲಕೋಟೆಯಲ್ಲಿಯೇ ಮಾತನ್ನಾಡುತ್ತಿದ್ದ ಅವರು ಕುಡುಕರು ಟೈಟ್ ಆದ್ರೆ, ಸರ್ಕಾರಕ್ಕೆ ಹಾಲು ಕುಡಿದಂತೆ. ಕಳೆದ ಬಾರಿ 15 ಸಾವಿರ ಕೋಟಿ ಆದಾಯ ಬಂದದ್ದೇ ಕುಡುಕರ ಗಮ್ಮಿತ್ತಿನಿಂದ. ಜನರೂ ಹೆಚ್ಚೆಚ್ಚು ಕುಡಿದರು, ಟ್ಯಾಕ್ಸ್ ಹರಿದುಬಂತು, ಸರ್ಕಾರದ ಬೊಕ್ಕಸವೂ ತುಂಬಿತು ಎಂದು ಹಾಸ್ಯ ಚಟಾಕಿ ಹಾರಿಸಿದ್ದರು.

Comments are closed.