ಕರ್ನಾಟಕ

ಪುತ್ರಿ ಸ್ನೇಹಿತೆ ಮೇಲೆ ಅತ್ಯಾಚಾರ ನಡೆಸಿದ ಕಾಮುಕ ತಂದೆ !

Pinterest LinkedIn Tumblr

rape

ಬೆಳಗಾವಿ: ಪುತ್ರಿಯ ಸ್ನೇಹಿತೆ ಮೇಲೆ ತಂದೆಯೇ ಅತ್ಯಾಚಾರ ಎಸಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಳಿಹಟ್ಟಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಶಂಕರ ಮಲಗೌಡ ಪಾಟೀಲ (48) ಅತ್ಯಾಚಾರ ಎಸಗಿರುವ ಆರೋಪಿ. ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಮಗಳ ಸ್ನೇಹಿತೆಯಾಗಿದ್ದ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಬಳಿಕ ಬಾಲಕಿಯ ಪೋಷಕರಿಗೆ ವಿಷಯ ತಿಳಿದು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿಎಸ್‌ಐ ಮಲ್ಲಿಕಾರ್ಜುನ ಕುಲಕರ್ಣಿ ಮತ್ತು ಸಿಪಿಐ ಬಡದೇಸಾಯಿ ಅವರು ತನಿಖೆ ನಡೆಸಿ ಆರೋಪಿ ಶಂಕರನನ್ನು ಬಂಧಿಸಿದ್ದಾರೆ.

Comments are closed.