ಸ್ಕೂಲ್ನಲ್ಲಿ ಮಕ್ಕಳಿಗೆ ಹೇಳ್ಕೊಡೋ ಸೈನ್ಸ್ ಹೇಗಿರುತ್ತೆ? ಬರೀ ಪುಸ್ತಕದ ಬದನೆಕಾಯಿ ಅನ್ನೋ ಹಾಗಿರತ್ತೆ ಅನ್ನೋದನ್ನು ಹಿರಿಯ ವಿಜ್ಞಾನಿಗಳೇ ಒಪ್ಕೊಳ್ತಾರೆ. ಮಕ್ಕಳಿಗೆ ಪಠ್ಯದಲ್ಲಿ ಕಲಿತದ್ದನ್ನು ನಿತ್ಯದ ಬದುಕಿಗೆ ಅಪ್ಲೆ„ ಮಾಡಕ್ಕಾಗಲ್ಲ. “ಡಿಸ್ಕವರಿ ಕಿಡ್ಸ್ ಸೈನ್ಸ್ ಅಡ್ಡ’ ಈ ಹಿನ್ನೆಲೆಯಲ್ಲಿ ಹೊಸ ಪ್ರಯತ್ನ.
ಮಗುವಿನ ಸೈನ್ಸ್ನು° ಹೆಚ್ಚು ಆಪ್ತವಾಗಿ, ನಿತ್ಯದ ಬದುಕಿನ ಜೊತೆ ಸಮೀಕರಿಸಿ ಕಲಿಸೋ ಪ್ರಯತ್ನ ಇದು. ಗಾಳಿ, ಬೆಳಕು, ನೀರು, ಶಬ್ಧಗಳ ವಿವಿಧ ಅವಸ್ಥಾಂತರಗಳನ್ನು ಪ್ರಯೋಗಗಳ ಮೂಲಕ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ನಿತ್ಯದ ಬದುಕಿನಲ್ಲಿ ವಿಜ್ಞಾನದ ಅಂಶಗಳು ಎಲ್ಲೆಲ್ಲಿವೆ, ಅವನ್ನು ಪತ್ತೆ ಮಾಡುವುದು ಹೇಗೆ? ಹೀಗೆ ಪತ್ತೆಯಾದ ವಿಷಯಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಯಾವ ರೀತಿ ಮಾಡಬಹುದು, ಮಕ್ಕಳೂ ಮಾಡಬಹುದಾದ ಹೊಸ ಆವಿಷ್ಕಾರಗಳ ದಾರಿ ಯಾವುದು? ಮೊದಲಾದ ವಿಚಾರಗಳನ್ನು ಮಕ್ಕಳು ಸೈನ್ಸ್ ಅಡ್ಡ ದಲ್ಲಿ ತಿಳ್ಕೊಳ್ಳಬಹುದು. ಸ್ಕೂಲ್ನಲ್ಲಿ ಬಹಳ ಸ್ಟ್ರಿಕ್ಟ್ ಆಗಿ ಲ್ಯಾಬ್ನಲ್ಲಿ ಮಾಡೋ ಪ್ರಯೋಗಗಳನ್ನು ಇಲ್ಲಿ ಆಟದಂತೆ ಖುಷಿಯಿಂದ ಮಾಡಬಹುದು.
ಉದಾಹರಣೆಗೆ ಸೌಂಡ್ ಅರ್ಥಾತ್ ಶಬ್ಧವನ್ನು ಅವರ ವಿವಿಧ ಪ್ರಭೇದಗಳ ಮೂಲಕ ಪ್ರಾಕ್ಟಿಕಲ್ ಆಗಿ ತಿಳಿಸುತ್ತಾರೆ.ಕೇಳಬಹುದಾದ ಶಬ್ಧಗಳು, ಕೇಳಿಸದ ಶಬ್ಧಗಳು, ಶಬ್ಧಕ್ಕೂ ಧ್ವನಿಗೂ ಇರುವ ವ್ಯತ್ಯಾಸ, ಧ್ವನಿ ಕಂಪನಗಳು. ಇವುಗಳನ್ನು ಮಕ್ಕಳ ಅನುಭವಕ್ಕೆ ತಂದು ವಿವರಿಸಲಾಗುತ್ತೆ. ಹೀಗೇ ವಿಜ್ಞಾನದ ವಿವಿಧ ವಿಚಾರಗಳನ್ನು ಮಕ್ಕಳು ತಾವಾಗಿಯೇ ಗ್ರಹಿಸುವಂತೆ ಮಾಡುವುದು ಇದರ ವಿಶೇಷತೆ. “ಹ್ಯಾಂಡ್ಸ್ ಆನ್ – ಮೈಂಡ್ಸ್ ಆನ್’ ಅನ್ನೋದು ಅಡ್ಡಾದ ಫೇಮಸ್ ಸಾಲು.
ಅಂತರಾಷ್ಟ್ರೀಯ ಡಿಸ್ಕವರಿ ಚಾನೆಲ್ ಟೀಂನ ಭಾಗವಾಗಿರೋ ಡಿಸ್ಕವರಿ ಕಿಡ್ಸ್ ಬೆಂಗಳೂರಿನ ಸಂಸ್ಥೆಯೊಂದಿಗೆ ಸೇರಿ “ಡಿಸ್ಕವರಿ ಕಿಡ್ಸ್ ಸೈನ್ಸ್ ಅಡ್ಡ’ವನ್ನು ರೂಪಿಸಿದೆ. ಇಲ್ಲಿ ಕಲಿಸಿಕೊಡುವ ಪ್ರಯೋಗಗಳು ಅಂತಾರಾಷ್ಟ್ರೀಯ ಮಟ್ಟದವು. ಮಕ್ಕಳಿಗೆ ವಿಜ್ಞಾನದ ಬಗ್ಗೆ ಕುತೂಹಲ ಹೆಚ್ಚಬೇಕೆಂಬ ಉದ್ದೇಶದಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ಎಲ್ಲಿ: 146, 1ನೇ ಮಹಡಿ, ಶಾಂತಲಾ ಪ್ಲಾಜಾ, 14 ಕ್ರಾಸ್, 8ನೇ ಮೇನ್, ಮಲ್ಲೇಶ್ವರ,
(ಕಿಗ್ಗದಾಸಪುರ, ಜಯನಗರ 2 ಹಾಗೂ 9ನೇ ಬ್ಲಾಕ್, ಕೇಂಬ್ರಿಡ್ಜ್ ಎಲ್.ಒ ದಲ್ಲೂ ಬ್ರ್ಯಾಂಚ್ಗಳಿವೆ)
ಸಂಪರ್ಕ: 7204101111
ಫೇಸ್ಬುಕ್-https://www.facebook.com/ScienceAdda/
ವಿವರಗಳಿಗೆ: http://www.scienceadda.com/
-ಉದಯವಾಣಿ
Comments are closed.