ಕರ್ನಾಟಕ

ಮಗನಿಂದಲೇ ತಂದೆಯ ಕೊಲೆ

Pinterest LinkedIn Tumblr

murderಬೆಂಗಳೂರು,ಜೂ.೨೭-ಮಚ್ಚಿನಿಂದ ಅಪ್ಪನ ಕತ್ತು ಕತ್ತರಿಸಿ ಮಗನೇ ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ವಿವೇಕನಗರದ ಶ್ರೀನಿವಾಗಿಲು ಬಳಿ ನಿನ್ನೆ ರಾತ್ರಿ ನಡೆದಿದೆ.

ಕೋರಮಂಗಲದ ಹೊರವರ್ತುಲ ರಸ್ತೆಯ ಶ್ರೀವಾಗಿಲುವಿನಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದ ಗೌತಮ್  ಅವರನ್ನು ಕೊಲೆಗೈದ ಮಗ ಕಿರಣ್‌ಕುಮಾರ್  ನನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.
ಏಂಇಜಿಯಲ್ಲಿ ಗುಮಾಸ್ತರಾಗಿ ನಿವೃತ್ತರಾಗಿದ್ದ ಗೌತಮ್ ಅವರಿಗೆ ಕಿಶೋರ್‌ಕುಮಾರ್ ಕಿರಣ್‌ಕುಮಾರ್ ಹಾಗೂ ಕಿಶನ್‌ಕುಮಾರ್ ಎಂಬ ಮೂವರು ಮಕ್ಕಳಿದ್ದು ಅವರಲ್ಲಿ ಮಧ್ಯದವನಾದ ಆರೋಪಿ ಕಿರಣ್‌ಕುಮಾರ್ ಬಿಕಾಂ ಮುಗಿಸಿ ಬಾಷ್ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದನು ಆದರೆ ಕಳೆದೊಂದು ವರ್ಷದಿಂದ ಕೆಲಸಕ್ಕೆ ಹೋಗದೇ ಮನೆಯಲ್ಲೇ ಕಾಲ ಕಳೆಯುತ್ತಿದ್ದನು.
ಹೊರಗೆ ಎಲ್ಲೂ ಹೋಗದೆ ಸದಾ ಮನೆಯಲ್ಲಿರುತ್ತಿದ್ದ ಆತ ತಂದೆ ತಾಯಿ ಹಾಗೂ ಸಹೋದರರೊಂದಿಗೆ ಆಗಾಗ ಜಗಳ ತೆಗೆಯುತ್ತಿದ್ದನು ಹೃದ್ರೋಗದಿಂದ ಬಳಲುತ್ತಿದ್ದ ತಂದೆ ಗೌತಮ್ ಮಗನ ಜಗಳದಿಂದ ಬೇಸತ್ತಿದ್ದರು.
ವಸಂತನಗರದಲ್ಲಿ ನಿನ್ನೆ ಸಂಜೆ ಸಂಬಂಧಿಕರೊಬ್ಬರ ವಿವಾಹ ಆರತಕ್ಷತೆಯಿದ್ದು ತಾಯಿ ಮೊದಲಮಗ ಹಾಗೂ ಕೊನೆಯ ಮಗ ಹೋಗಿದ್ದರು ಎಷ್ಟು ಬಾರಿ ಕರೆದರೂ ಗೌತಮ್ ಅವರ ಜೊತೆ ಹೋಗಿದೇ ಮನೆಯಲ್ಲೇ ಉಳಿದುಕೊಂಡಿದ್ದ.
ತಾಯಿ ಸಹೋದರರು ಹೋದ ನಂತರ ತಂದೆಯೊಂದಿಗೆ ಕಿರಣ್ ಜಗಳ ತೆಗೆದಿದ್ದಾನೆ ಎಷ್ಟು ಬಾರಿ ಸುಮ್ಮನಿರು ಎಂದು ಕೇಳಿಕೊಂಡರೂ ಆತ ಕೇಳದೇ ಜಗಳ ಮುಂದುವರೆಸಿದ್ದ ಮಗನ ಜಗಳವನ್ನು ರಾತ್ರಿ ೧೦ರ ವೇಳೆ ಪತ್ನಿಗೆ ಮೊಬೈಲ್ ಕರೆ ಮಾಡಿ ಗೌತಮ್ ಅವರು ತಿಳಿಸಿ ಮನೆಗೆ ಬೇಗ ಬರುವಂತೆ ಹೇಳಿದ್ದಾರೆ.
ಯಾವಾಗಲೂ ಮಗನ ವರ್ತನೆ ಇದ್ದದ್ದೇ ಎಂದುಕೊಂಡು ಅವರು ಸುಮ್ಮನಾಗಿದ್ದು ಇದಾದ ೧ಗಂಟೆಯ ನಂತರ ಪಕ್ಕದ ಮನೆಯವರು ಗೌತಮ್ ಅವರನ್ನು ಕಿರಣ್ ಮಚ್ಚಿನಿಂದ ಹೊಡೆದಿದ್ದಾನೆ ಎಂದು ತಿಳಿಸಿದ್ದು ಆತಂಕದಿಂದ ಅವರು ಮನೆಗೆ ಬಂದು ಣೋಡಿದಾಗ ಗೌತಮ್ ಅವರು ಕೊಲೆಯಾಗಿ ಬಿದ್ದಿದ್ದರು.
ಕೃತ್ಯವೆಸಗಿದ್ದ ಕಿರಣ್‌ನನ್ನು ತಾಯಿ ಹಾಗೂ ಇನ್ನಿಬ್ಬರು ಪೊಲೀಸರಿಗೆ ಒಪ್ಪಿಸಿದ್ದು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಸಂದೀಪ್‌ಪಾಟೀಲ್ ಅವರು ತಿಳಿಸಿದ್ದಾರೆ.

Comments are closed.