ಕರ್ನಾಟಕ

ಪ್ಯಾರಾ ಮೆಡಿಕಲ್ ಕಾಲೇಜಿಗೆ ಅನುಮತಿ ವಂಚನೆ :ನಕಲಿ ಕುಲಪತಿ ಅರೆಸ್ಟ್

Pinterest LinkedIn Tumblr

nakali

ಬೆಂಗಳೂರು: ಭಾರತ ಸರ್ಕಾರದಿಂದ ಪ್ಯಾರಾ ಮೆಡಿಕಲ್, ಬಯೋ ನರ್ಸಿಂಗ್ ಕಾಲೇಜುಗಳನ್ನು ಆರಂಭಿಸಲು ಅನುಮತಿ ಸಿಕ್ಕಿದೆ ಎಂದು ನಕಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿದ್ದ ನಕಲಿ ಕುಲಪತಿಯೊಬ್ಬ ಪೊಲೀಸರ ಖೆಡ್ಡಕ್ಕೆ ಬಿದ್ದಿದ್ದಾನೆ. ಬನ್ನೇರುಘಟ್ಟ ರಸ್ತೆಯಲ್ಲಿ ಬಯೋ ಕೆಮಿಕ್ ಗ್ರಾಂಟ್‌ಕಮೀಷನ್ ಮತ್ತು ಯೂನಿವರ್ಸಿಟಿ ಆಫ್ ಬಯೋ ಕೆಮಿಕ್ ಹೆಲ್ತ್ ಸೈನ್ಸ್ ಎಂಬ ಕೇಂದ್ರ ತೆರೆದು ಅದರ ಕುಲಪತಿ ಎಂದು ಹೇಳಿಕೊಂಡು ದೇಶದ ವಿವಿಧ ಪ್ರತಿಷ್ಠಿತ ಕಾಲೇಜುಗಳ ಆಡಳಿತ ಮಂಡಳಿಯನ್ನು ವಂಚಿಸಿ ಹಣ ಗುಳುಂ ಮಾಡಿದ್ದ ಸಂತೋಷ್ ಲೆಹಾರ್ ಎಂಬಾತನನ್ನು ದಕ್ಷಿಣ ವಿಭಾಗ ಪೊಲೀಸರು ಬಂಧಿಸಿ ಅಕ್ರಮವನ್ನು ಬಯಲಿಗೆಳೆದಿದ್ದಾರೆ.

ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಮೊಹರುಗಳನ್ನೇ ನಕಲು ಮಾಡಿ, ನಕಲಿ ಗೆಜೆಟೆಡ್ ಪತ್ರಗಳನ್ನು ತಯಾರಿಸಿ ಆರೋಪಿಸಿ ಈ ದಂಧೆ ನಡೆಸಿದ್ದ. ವಿಚಿತ್ರವೆಂದರೆ ಈತ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರನ್ನು ಕೂಡ ನೇಮಿಸಿಕೊಂಡಿದ್ದ ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.

ನಡೆದಿದ್ದೇನು? ಚೆನ್ನೈ ಮೂಲದ ಟಿ.ಸಿ.ಅರಿವಳಗನ್ ಎಂಬುವರಿಗೆ ಆರೋಪಿ ಸಂತೋಷ್ ಅಂತರ್ಜಾಲದ ಮೂಲಕ ಸಂಪರ್ಕಿಸಿ ನಮ್ಮ ವಿವಿಯಿಂದ ಹೊಸದಾಗ ಬಯೋ ಮೆಡಿಕಲ್, ಪ್ಯಾರಾ ಮೆಡಿಕಲ್ ಮತ್ತು ಬಯೋ ಕೆಮಿಕ್ ನರ್ಸಿಂಗ್ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡುವ ಅಧಿಕಾರವನ್ನು ಭಾರತ ಸರ್ಕಾರದಿಂದ ಪಡೆದಿದ್ದೇವೆ ಎಂದು ಹೇಳಿಕೊಂಡಿದ್ದ. ಇದಲ್ಲದೆ ವಿಶ್ವವಿದ್ಯಾಲಯದ ಇದನ್ನು ನಂಬಿದ ಅರಿವಳಗನ್, ಆರೋಪಿಗೆ 78.40000 ಗಳನ್ನು ನೀಡಿದ್ದ. ವಿಚಿತ್ರವೆಂದರೆ ಈತ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರನ್ನು ಕೂಡ ಕೆಲಸಕ್ಕೆ ನೇಮಿಸಿಕೊಂಡಿದ್ದ ಅಂಶ ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.

ನಡೆದಿದ್ದೇನು? ಚೆನ್ನೈ ಮೂಲದ ಟಿ.ಸಿ.ಅರಿವಳಗನ್ ಎಂಬುವರಿಗೆ ಆರೋಪಿ ಸಂತೋಷ್ ಅಂತರ್ಜಾಲದ ಮೂಲಕ ಸಂಪರ್ಕಿಸಿ ನಮ್ಮ ವಿವಿಯಿಂದ ಹೊಸದಾಗಿಬಯೋ ಮೆಡಿಕಲ್, ಪ್ಯಾರಾ ಮೆಡಿಕಲ್ ಮತ್ತು ಬಯೋ ಕೆಮಿಕ್ ನರ್ಸಿಂಗ್ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡುವ ಅಧಿಕಾರವನ್ನು ಭಾರತ ಸರ್ಕಾರದಿಂದ ಪಡೆದಿದ್ದೇವೆ ಎಂದು ಹೇಳಿಕೊಂಡಿದ್ದ. ಇದಲ್ಲದೆ ಅವರಿಗೆ ನಂಬಿಕೆ ಬರುವಂತೆ ವಿಶ್ವವಿದ್ಯಾಲಯದ ಪ್ರಮಾಣಪತ್ರಗಳನ್ನು ಕೇರಳದ ಅಟ್ಟಿಪಾಡಿ, ತಮಿಳುನಾಡಿನ ವಡಲೂರು, ಆಂಧ್ರದ ಚಿತ್ತೂರು ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿಂದ ವಿದ್ಯಾಸಂಸ್ಥೆಯ ಅರ್ಜಿ ಪಡೆದು ಸ್ಥಳ ಪರಿಶೀಲನೆ ಮಾಡಿ ಸುಮಾರು 78,40,000ರೂ. ಗಳನ್ನು ಪಡೆದಿದ್ದ ಎಂದು ತಿಳಿದುಬಂದಿದೆ.

ಇದೇ ಸಂಸ್ಥೆಗೆ ಸಂಬಂಧಪಟ್ಟಂತೆ ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 24ರಂದು ಪತ್ರಿಕೆಯೊಂದರಲ್ಲಿ ನಕಲಿ ವಿವಿ ಬಗ್ಗೆ ಸುದ್ದಿ ಪ್ರಕಟವಾಗಿತ್ತು. ಇದರ ಬಗ್ಗೆ ತಿಳಿದ ಅರಿವಳಗನ್, ಮೆಸೇಜ್ ಮೂಲಕ ಸಂತೋಷ್‌ಗೆ ವಿಚಾರಿಸಿದಾಗ ಇದನ್ನೆಲ್ಲಾ ನಂಬಬೇಡಿ ಎಂದು ಆಗಲೂ ಅವರಿಗೆ ಮಂಕು ಬೂದಿ ಎರಚಿದ್ದ. ಇದೇ ವೇಳೆ ಪಶ್ಚಿಮ ಬಂಗಾಳ ಪೊಲೀಸರು ಮೇ 6ರಂದು ಈ ಸಂಸ್ಥೆ ಮೇಲೆ ದಾಳಿ ನಡೆಸಿ ಸಿಇಒ ಶ್ಯಾಮಲ್ ದತ್ತಾ ಎಂಬುವವರನ್ನು ದಸ್ತಗಿರಿ ಮಾಡಿ ಹೆಚ್ಚಿನ ವಿಚಾರಣೆ ನಡೆಸಿದಾಗ ಇದರ ಕೇಂದ್ರ ಬೆಂಗಳೂರಿನಲ್ಲಿದೆ ಎಂಬುದು ಬೆಳಕಿಗೆ ಬಂದಿತ್ತು.

ತಕ್ಷಣ ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿ ಇದರ ಬಗ್ಗೆ ಮಾಹಿತಿ ನೀಡಲಾಗಿತ್ತು. ವಿಳಾಸ ಪತ್ತೆ ಹಚ್ಚಿ ಅಲ್ಲಿಗೆ ದಕ್ಷಿಣ ವಿಭಾಗ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ ಕಚೇರಿಗೆ ಬೀಗ ಹಾಕಿ ಸಂತೋಷ್ ಪರಾರಿಯಾಗಿದ್ದ. ನಂತರ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ವಂಚನೆ, ನಂಬಿಕೆ ದ್ರೋಹ, ಸುಲಿಗೆ, ಫೋರ್ಜರಿ ಸೇರಿದಂತೆ ಹಲವು ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಅಂದಿನಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಸಂತೋಷ್ ಲೋಹರ್‌ನ ಬೇಟೆ ಆರಂಭಿಸಲಾಗಿತ್ತು.

ಜೆ.ಪಿ.ನಗರ ಇನ್ಸ್‌ಪೆಕ್ಟರ್ ಸಂಜೀವ್‌ಕುಮಾರ್ ಜಂಬೋ ಮಹಾಜನ್, ಎಸ್‌ಐ ರಘುನಾಯಕ, ಸಿಬ್ಬಂದಿಗಳಾದ ಪುರುಷೋತ್ತಮ್,ಸಿದ್ದಯ್ಯ, ಚಿಕ್ಕಕೆಂಪಯ್ಯ, ಮುರಳಿ, ರಮೇಶ್, ಕೆಂಪೇಗೌಡ ಅವರನ್ನೊಳಗೊಂಡ ತಂಡ ಆರೋಪಿ ತಲೆಮರೆಸಿಕೊಂಡಿದ್ದ ಬನ್ನೇರುಘಟ್ಟ ರಸ್ತೆ, ಕಾಳೇನಅಗ್ರಹಾರ, ಎಂಎಲ್‌ಎ ಲೇಔಟ್, ತಿರುಮಲ ಗಾರ್ಡನ್ ಅಪಾರ್ಟ್‌ಮೆಂಟ್ ಮೇಲೆ ಜೂ.22 ರಂದು ದಾಳಿ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತನಿಂದ 8,96,500 ರೂ. ನಗದು, ಭಾರತ ಸರ್ಕಾರದ ಚಿಹ್ನೆ ಇರುವ ಇನ್ನೋವಾ ಕಾರು, ವಿವಿಧ ಇಲಾಖೆಗಳ ಮೊಹರುಗಳು, ಆಕ್ಸಿಸ್ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಪಾಸ್‌ಬುಕ್, ಕ್ರೆಡಿಟ್ ಕಾರ್ಡ್‌ಗಳು ಜಪ್ತಿ ಮಾಡಲಾಗಿದೆ. ಆರೋಪಿಯು ಬ್ಯಾಂಕ್‌ವೊಂದರಲ್ಲಿ ಇಟ್ಟಿದ್ದ 27 ಲಕ್ಷ ರೂ.ಗಳನ್ನು ಫ್ರೀಜ್ ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ. ಆರೋಪಿಯ ಸಹಚರರಾದ ಶಿವಕುಮಾರ್, ಬೋಜ್ ಬಾಬು, ಮಹೇಶ್, ಚಂದ್ರಶೇಖರ್, ಸುಬ್ರತೋದಾಸ್, ರಾಜೇಶ್ ಎಂಬುವರು ತಲೆ ಮರೆಸಿಕೊಂಡಿದ್ದು, ಇವರ ಪತ್ತೆಗೆ ಪೊಲೀಸ್ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ಚಾಕಚಕ್ಯತೆಯಿಂದ ಆರೋಪಿಯನ್ನು ಸೆರೆ ಹಿಡಿದ ಜಯನಗರ ಉಪವಿಭಾಗದ ಪೊಲೀಸರ ಕಾರ್ಯವನ್ನು ಪ್ರಶಂಸಿಸಿದ್ದಾರೆ.

Comments are closed.