ಬೆಂಗಳೂರು: ಕೇಂದ್ರ ಮಾದಕ ವಸ್ತು ಕಳ್ಳಸಾಗಣೆ ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು ಮಾದಕ ವಸ್ತು ಸಾಗಾಣಿಕೆ ಆರೋಪದ ಮೇಲೆ ಆರ್.ಟಿ ನಗರದಲ್ಲಿ ಮಂಗಳವಾರ ಚಿಕ್ಕಮಗಳೂರು ಮೂಲದ 26 ವರ್ಷದ ಮಾಜಿ ಮಿಸ್ ಕರ್ನಾಟಕ ದರ್ಶಿತ್ಮಿತಾ ಗೌಡಾರನ್ನು ಬಂಧಿಸಿದ್ದಾರೆ.
ನಗರದಲ್ಲಿ ಮಾಡೆಲಿಂಗ್ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಈಕೆಯ ಮೇಲೆ ಸ್ನೇಹಿತರ ಜತೆ ಸೇರಿ ಮಾದಕ ವಸ್ತು ಸಾಗಾಣಿಕೆ ಮಾಡಿದ ಆರೋಪವಿದೆ.
2015ರಲ್ಲಿ ರೂಪದರ್ಶಿ ದರ್ಶಿತ್ಮಿತಾ ಸ್ನೇಹಿತ ಅಬ್ದುಲ್ ಖಾದರ್ ಎಂಬಾತನನ್ನು ಬಂಧಿಸಲಾಗಿತ್ತು. ಈತನು ನೀಡಿದ ಮಾಹಿತಿ ಮೇರೆಗೆ ರೂಪದರ್ಶಿ ಮತ್ತು ಆಕೆಯ ಮೂವರು ಸ್ನೇಹಿತರನ್ನು ಬಂಧಿಸಲಾಗಿದೆ. ಅವರಲ್ಲಿ ಇಬ್ಬರು ಮಂಗಳೂರು ಮೂಲದವರಾಗಿದ್ದು ಮತ್ತೊಬ್ಬರು ಬೆಂಗಳೂರಿನವರಾಗಿದ್ದಾರೆ. ಬಾಲ್ಯ ಸ್ನೇಹಿತರಾಗಿರುವ ಖಾದರ್ ಮತ್ತು ರೂಪದರ್ಶಿ ಗೋವಾ ಹಾಗೂ ವಿದೇಶದಿಂದ ಮಾದಕ ವಸ್ತುಗಳನ್ನು ತಂದು, ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ರೂಪದರ್ಶಿಯನ್ನು ಮಂಗಳವಾರವೇ ಬಂಧಿಸಲಾಗಿದ್ದು ತೀವ್ರ ವಿಚಾರಣೆಗೊಳಸಪಡಿಸಲಾಗಿದೆ. ಬುಧವಾರ ಆಕೆಯನ್ನು ನ್ಯಾಯಾಧೀಶರ ಮುಂದೆ ಸಹ ಹಾಜರು ಪಡಿಸಲಾಗಿತ್ತು.
ಆದರೆ ಖಾದರ್‌ನ ಅವ್ಯವಹಾರಗಳಲ್ಲಿ ತನ್ನ ಪಾತ್ರವನ್ನು ರೂಪದರ್ಶಿ ತಳ್ಳಿ ಹಾಕಿದ್ದಾರೆ.
Comments are closed.