ಬೆಂಗಳೂರು: ಯಾರ ಸಚಿವ ಸ್ಥಾನ ಕೈ ತಪ್ಪಿದ್ದರ ಹಿಂದೆ ನನ್ನ ಕೈವಾಡವಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ತಮ್ಮ ಸಚಿವ ಸ್ಥಾನ ತಪ್ಪಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಜತೆಜತೆಗೆ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸಹ
ರೆಬೆಲ್ ಶಾಸಕರು( ವಿ ಶ್ರೀನಿವಾಸ್ ಪ್ರಸಾದ್, ಖಮರೂಲ್ ಇಸ್ಲಾಂ, ಬಾಬುರಾವ್ ಚಿಂಚನಸೂರ್) ರ್ಟಾರ್ಗೆಟ್ ಮಾಡಿದ್ದರು. ನಮ್ಮನ್ನು ರಕ್ಷಿಸಲು ಖರ್ಗೆ ಪ್ರಯತ್ನ ಮಾಡಲಿಲ್ಲ. ಖರ್ಗೆ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿರೋಧಿ ಧೋರಣೆ ತೋರಿದ್ದಾರೆ ಎಂದು ಅವರುಆರೋಪಿಸಿದ್ದರು.
ಈ ಆರೋಪಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಖರ್ಗೆ ತಮ್ಮ ಆಪ್ತರ ಮೂಲಕ ರೆಬೆಲ್ ಶಾಸಕರಿಗೆ ಸಂದೇಶವನ್ನು ಕಳುಹಿಸಿದ್ದಾರೆ.
ಇಡೀ ಸಂಪುಟ ಪುನರ್ ರಚನೆಯಲ್ಲಿ ನನ್ನ ಪಾತ್ರವಿಲ್ಲ. ಖಾತೆ ಬದಲಾವಣೆಯಾದರೂ ಸಣ್ಣಪುಟ್ಟ ಖಾತೆಯನ್ನಾದರೂ ನೀಡಿ ಸಂಪುಟದಲ್ಲಿರಿಸಿಕೊಳ್ಳಿ ಎನ್ನುವುದರ ಮೂಲಕ ನಿಮ್ಮನ್ನು ಉಳಿಸುವ ಪ್ರಯತ್ನ ಮಾಡಿದ್ದೆ. ವರಿಷ್ಠರ ನಿರ್ಧಾರದಂತೆ ಸಿಎಂ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ ಎಂಗು ಖರ್ಗೆ ತಿಳಿಸಿದ್ದಾರೆ.
ನನ್ನನ್ನು ಅಲ್ಪಸಂಖ್ಯಾತರ ವಿರೋಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಇದರಿಂದ ನನಗೆ ಬೇಸರವಾಗಿದೆ. ಈ ಹಿಂದೆ ಅಡ್ಡ ಮತದಾನದ ಮೂಲಕ ವಿಧಾನ ಪರಿಷತ್ ಚುನಾವಣೆಯಲ್ಲಿ ಸರಡಗಿಗೆ ಸೋಲಾಗಿತ್ತು. ಆದರೆ ನಾನೇ ಹಠ ಹಿಡಿದು ಪರಿಷತ್ಗೆ ಅವರನ್ನು ನಾಮ ನಿರ್ದೇಶನ ಮಾಡಿಕೊಂಡಿದ್ದೆ. ಕೆ. ಸಿ ಕೊಂಡಯ್ಯ ಟಿಕೆಟ್ ಕೊಡಲು ಎಲ್ಲರಿಂದಲೂ ವಿರೋಧ ವ್ಯಕ್ತವಾದಾಗ ನಾನೇ ವಿಧಾನ ಪರಿಷತ್ಗೆ ಅವರಿಗೆಟಿಕೆಟ್ ಕೊಡಿಸಿದ್ದೆ. ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಹಲವು ಮಹಿಳೆಯರಿಂದ ಬೇಡಿಕೆ ಬಂದಿತ್ತು. ಆದರೆ ನಾನು ವೀಣಾ ಅಚ್ಚಯ್ಯನವರಿಗೆ ಟಿಕೆಟ್ ಕೊಡಿಸಿದ್ದೆ. ನಾನು ಅಲ್ಪಸಂಖ್ಯಾತ ವಿರೋಧಿಯಲ್ಲ ಎಂದು ಖರ್ಗೆ ಸ್ಪಷ್ಟನೆ ನೀಡಿದ್ದಾರೆ.
Comments are closed.