ಕರ್ನಾಟಕ

ಶ್ರೀನಿವಾಸ್ ಪ್ರಸಾದ್ ಭೇಟಿಯಾದ ಅನುಪಮಾ ಶೆಣೈ

Pinterest LinkedIn Tumblr

shenoyಬೆಂಗಳೂರು: ಕೂಡ್ಲಿಗಿ ಡಿವೈಎಸ್ಪಿ ಆಗಿದ್ದ ಅನುಪಮಾ ಶೆಣೈ ಅವರು ಗುರುವಾರ ಕಾಂಗ್ರೆಸ್ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಗಾಲ್ಫ್‌ ಕೋರ್ಸ್ ರಸ್ತೆಯಲ್ಲಿರುವ ಶ್ರೀನಿವಾಸ್ ಪ್ರಸಾದ್ ಅವರ ನಿವೇಶಕ್ಕೆ ಭೇಟಿ ನೀಡಿದ ಅನುಪಮಾ, ‘ನಿಮ್ಮನ್ನು ಸಚಿವ ಸ್ಥಾನದಿಂದ ಕೈಬಿಡಬಾರದಿತ್ತು. ನಿಮ್ಮ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದು ಹೇಳಿದರು’ ಎನ್ನಲಾಗಿದೆ.
‘ತರಾತುರಿಯಲ್ಲಿ ನಿಮ್ಮ ರಾಜೀನಾಮೆ ಅಂಗೀಕರಿಸಲಾಗಿದೆ. ಅಧಿಕಾರಿಗಳ ಈ ಕ್ರಮಕ್ಕೆ ನನಗೆ ಬೇಸರ ಇದೆ. ನಿಮ್ಮ ಹೋರಾಟ ನನಗೆ ಮೆಚ್ಚುಗೆಯಾಯಿತು’ ಎಂದು ಶ್ರೀನಿವಾಸ್ ಪ್ರಸಾದ್ ಅನುಪಮಾ ಅವರಿಗೆ ಹೇಳಿದರು ಎಂದು ತಿಳಿದು ಬಂದಿದೆ.
ನಾಯಕತ್ವ  ಬದಲಾವಣೆ ಆಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಪ್ರಸಾದ್  ಹೇಳಿದರು ಎನ್ನಲಾಗಿದೆ.

Comments are closed.