ಕರ್ನಾಟಕ

ಮಂಗಳಮುಖಿಯೊಂದಿಗೆ ಮದುವೆಯಾದ ಯುವಕನಿಗೆ ಪೋಷಕರಿಂದ ಹಿಗ್ಗಾಮುಗ್ಗಾ ಥಳಿತ

Pinterest LinkedIn Tumblr

shiv

ಕೊಪ್ಪಳ: ಮಂಗಳಮುಖಿಯೊಂದಿಗೆ ಮದುವೆಯಾಗಿದ್ದ ಯುವಕನನ್ನ ಪೋಷಕರು ಹಿಗ್ಗಾಮುಗ್ಗಾ ಥಳಿಸಿ ಕರೆದುಕೊಂಡು ಹೋದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ನಗರದ ರೈಲ್ವೇ ನಿಲ್ದಾಣದ ಕ್ಯಾಂಟೀನ್‍ನಲ್ಲಿ ಕೆಲಸ ಮಾಡಿಕೊಂಡಿದ್ದ ಶಿವು(18) ಎಂಬಾತನನ್ನು ಯಾರಿಗೂ ಗೊತ್ತಿಲ್ಲದ ರೀತಿಯಲ್ಲಿ ಮಂಗಳಮುಖಿಯೊಬ್ಬಳು 3 ದಿನಗಳ ಹಿಂದೇ ಮದುವೆಯಾಗಿದ್ದಳು. ಅಲ್ಲದೇ ಶಿವುನನ್ನು ತನ್ನೊಂದಿಗೆ ಇಟ್ಟುಕೊಂಡಿದ್ದಳು.

ಈ ವಿಷಯ ತಿಳಿದ ಶಿವು ಪೋಷಕರಾದ ತಾಯಿ, ಅಣ್ಣ, ಅಕ್ಕ ಏಕಾಏಕಿ ಮಂಗಳಮುಖಿಯ ಮನೆಗೆ ನುಗ್ಗಿದ್ದಾರೆ. ಮದುವೆಯಾಗಿದ್ದ ಯುವಕ ಶಿವುನನ್ನು ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ. ಏನು ಅರಿಯದ ನಮ್ಮ ಮಗನನ್ನು ಅಕ್ರಮವಾಗಿ ಮದುವೆಯಾಗಿದ್ದಲ್ಲದೇ, ನಮ್ಮೊಂದಿಗೆ ಸಂಪರ್ಕವೇ ಇಲ್ಲದಂತೆ ಮಾಡಿದ್ದಾರೆ ಎಂದು ಶಿವು ತಾಯಿ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಕೊಪ್ಪಳದಲ್ಲಿ ಮಂಗಳಮುಖಿಯರ ಹಾವಳಿ ಹೆಚ್ಚಾಗಿದ್ದು, ಏನು ಅರಿಯದ ಯುವಕನನ್ನ ಹಣದ ಆಮೀಷವೊಡ್ಡಿ ತಮ್ಮ ಬುಟ್ಟಿಗೆ ಹಾಕಿಕೊಂಡು ಈ ರೀತಿ ಅಕ್ರಮವಾಗಿ ಮದುವೆಯಾಗಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಅಲ್ಲದೇ ಇದಕ್ಕೆ ಪೆÇಲೀಸರು ಕಡಿವಾಣ ಹಾಕಬೇಕೆಂದು ಆಗ್ರಹಿಸುತ್ತಿದ್ದಾರೆ.

ಆದ್ರೆ ಶಿವು ಮಾತ್ರ ನಾನು ಒಪ್ಪಿಕೊಂಡೆ ಮದುವೆಯಾಗಿದ್ದೇನೆ ನನಗೆ ಮಂಗಳಮುಖಿಯೇ ಬೇಕು ಎಂದು ಹೇಳುತ್ತಿದ್ದಾನೆ.

Comments are closed.