ಕರ್ನಾಟಕ

ಪತ್ನಿಯ ಕತ್ತಿಗೆ ವೈರ್​ ಬಿಗಿದು ಹತ್ಯೆಗೈದ ‘ಪತಿರಾಯ’!

Pinterest LinkedIn Tumblr

wife_murder_huby

ಕಲಬುರ್ಗಿ,ಜೂ.23 : ಪತಿಯೇ ಪತ್ನಿಯ ಕತ್ತಿಗೆ ವೈರ್ ಬಿಗಿದು ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಶಹಾಬಜಾರ್ ಬಡಾವಣೆಯಲ್ಲಿ ನಡೆದಿದೆ. ಮೃತಳನ್ನು 25 ವರ್ಷದ ಉಮಾ ಎಂದು ಗುರುತಿಸಲಾಗಿದೆ.

ಕಾರ್ಪೆಂಟರ್ ರಾಜುಗೆ ಉಮಾ ಎರಡನೇ ಹೆಂಡತಿ. ಉಮಾಳಿಗೂ ರಾಜು ಎರಡನೇ ಪತಿ ಎನ್ನಲಾಗಿದೆ. ಆದರೆ, ಮೂರು ವರ್ಷದ ಹಿಂದೆಯಷ್ಟೇ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಕಳೆದ ರಾತ್ರಿ ಇಬ್ಬರ ಮಧ್ಯೆ ಗಲಾಟೆ ನಡೆದಿದ್ದು, ಪತಿಯೇ ಪತ್ನಿಯ ಕತ್ತಿಗೆ ವೈಯರ್ ಬಿಗಿದಿದ್ದಾನೆ. ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದ ಉಮಾಳನ್ನು ಚಿಕಿತ್ಸೆಗಾಗಿ ಕಾರ್ನಲ್ಲಿ ಆಸ್ಪತ್ರೆಗೆ ದಾಖಲಿಸಲು ಸಾಗಿಸುವಾಗ ಉಮಾ ಮೃತಪಟ್ಟಿದ್ದಾಳೆ.

ಘಟನೆ ಬಳಿಕ ಆರೋಪಿ ಪತಿ ರಾಜು ತಲೆಮರೆಸಿಕೊಂಡಿದ್ದಾನೆ. ಈ ಬಗ್ಗೆ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.