ರಾಷ್ಟ್ರೀಯ

2 ಬಾರಿ ಶಾಸಕರಾಗಿದ್ದ ವ್ಯಕ್ತಿ ಈಗ ಬೀದಿ ಬದಿಯಲ್ಲಿ ವಾಸ ! ಕುಟುಂಬ ಸಮೇತ ಟೆಂಟ್ ನಲ್ಲಿಯೇ ಬದುಕು

Pinterest LinkedIn Tumblr

punjab-mla

ಚಂಡೀಗಢ: ಪಂಜಾಬ್‍ನ ಮಾಜಿ ಶಾಸಕರೊಬ್ಬರು ಮನೆಯಿಲ್ಲದೇ ಬೀದಿ ಬದಿಯಲ್ಲಿ ಟೆಂಟ್ ಹಾಕಿ ವಾಸಮಾಡುತ್ತಿದ್ದಾರೆ. 2 ಬಾರಿ ಬಿಎಸ್‍ಪಿ ಶಾಸಕರಾಗಿದ್ದ ಶಿಂಗಾರ ರಾಮ್ ಶಹುಂಗರ ಮತ್ತು ಅವರ ಕುಟುಂಬ ಸದಸ್ಯರು ಹಶೀರಾಪುರ್ ಜಿಲ್ಲೆಯಲ್ಲಿ ಈಗ ಬೀದಿ ಬದಿಯಲ್ಲಿ ವಾಸಿಸುತ್ತಿದ್ದಾರೆ.

ಶಾಸಕರ ಕುಟುಂಬದವರು ಇಲ್ಲಿಯವರೆಗೆ ಘರ್‍ಶಂಕರ್ ನಗರದ ಸರ್ಕಾರಿ ನಿವಾಸದಲ್ಲಿ ವಾಸವಾಗಿದ್ದರು. ಈ ನಿವಾಸದಲ್ಲಿ ಹಲವಾರು ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ ಕಾರಣ ಶಾಸಕರ ಕುಟುಂಬವನ್ನು ಕಳೆದ ಭಾನುವಾರ ಸರ್ಕಾರ ತೆರವುಗೊಳಿಸಿತ್ತು.

ಶಾಸಕನಾಗಿದ್ದಕ್ಕೆ ನನಗೆ ಈಗ ತಿಂಗಳಿಗೆ 20 ಸಾವಿರ ರೂ. ಪಿಂಚಣಿ ಬರುತ್ತಿದೆ. ಈ ಪಿಂಚಣಿ ದುಡ್ಡಿನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದೇನೆ. ಮನೆ ಸಿಗುವವರೆಗೂ ನಾನು ಬೀದಿಯಲ್ಲಿ ವಾಸಮಾಡುತ್ತೇನೆ ಎಂದು ಶಿಂಗಾರ ರಾಮ್ ಹೇಳಿದ್ದಾರೆ.

1992, 1997ರಲ್ಲಿ ಇವರು ಘರ್‍ಶಂಕರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಜಿಲ್ಲಾಧಿಕಾರಿಯವರ ಆದೇಶದ ಹಿನ್ನೆಲೆಯಲ್ಲಿ ಪೊಲೀಸ್ ಸಹಾಯದಿಂದಾಗಿ ಮನೆಯನ್ನು ತೆರವುಗೊಳಿಸಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.

ಬಡವರ ಅಭಿವೃದ್ಧಿ ಮಾಡಬೇಕೆಂಬ ಕಾನ್ಷಿ ರಾಮ್ ಅವರ ಉದ್ದೇಶದಂತೆ ನಾನು ಕೆಲಸ ಮಾಡಿದ್ದೇನೆ. ಎರಡೂ ಅವಧಿಯಲ್ಲಿ ನಾನು ನನಗಾಗಿ ಯಾವುದೇ ಹಣವನ್ನು ಬಳಸಿಕೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಪಂಜಾಬ್ ರಾಜ್ಯದಲ್ಲಿ ತನ್ನ ಸ್ವಂತ ಬಳಕೆಗೆ ಒಂದೇ ಒಂದು ನಿವಾಸವನ್ನು ನಿರ್ಮಾಣದ ಮಾಡದ ಪ್ರಥಮ ಶಾಸಕ ಶಿಂಗಾರ ರಾಮ್ ಎಂದು ಮಾಧ್ಯಮಗಳು ವರದಿ ಮಾಡಿವೆ.

Comments are closed.