
ಬೆಂಗಳೂರು: ಸಂಪುಟ ಪುನಾರಚನೆ ವೇಳೆ ವಸತಿ ಸಚಿವ ಹಾಗೂ ನಟ ಅಂಬರೀಷ್ ಅವರನ್ನು ಕೈ ಬಿಟ್ಚಿದ್ದಕ್ಕೆ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿವೆ. ಈ ಬೆನ್ನಲ್ಲೇ ಅಂಬರೀಷ್ ಪತ್ನಿ ಸುಮಲತಾ ಟ್ವಿಟ್ಟರ್ ನಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಭ್ರಷ್ಟಾಚಾರ ರಹಿತ, ಪ್ರಾಮಾಣಿಕರಿಗೆ, ನೇರ, ನಿಷ್ಠುರ ನಡೆ ನುಡಿಯವರಿಗೆ ಇದು ಕಾಲವಲ್ಲ. ಪ್ರಾಮಾಣಿಕ ವ್ಯಕ್ತಿಗಳು ಯುದ್ಧ ಗೆಲ್ಲಲು ಸಾಧ್ಯವಿಲ್ಲ, ಆದರೆ ಯುದ್ಧದಲ್ಲಿ ಯಾರು ಜಯಶಾಲಿ ಎಂಬುದನ್ನು ಕಾಲವೇ ಸಾಬೀತು ಪಡಿಸಲಿದೆ ಎಂದು ಸುಮಲತಾ ಟ್ವೀಟ್ ಮಾಡಿದ್ದಾರೆ.
Being non-corrupt , straight forward & honest might not win todays battle…but time will prove the ultimate winner in any war
— sumalatha ambareesh (@sumalathaA) June 19, 2016
Comments are closed.