ಕರ್ನಾಟಕ

ಕಾಗೋಡು ತಿಮ್ಮಪ್ಪ, ಸಂತೋಷ್‌ ಲಾಡ್‌ಗೆ ಮಂತ್ರಿ ಭಾಗ್ಯ

Pinterest LinkedIn Tumblr

kagodಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಸ್ಪೀಕರ್ ಕಾಗೋಡು ತಿಮ್ಮಪ್ಪ ಮತ್ತು ಕಲಘಟಗಿ ಶಾಸಕ ಸಂತೋಷ್ ಲಾಡ್ ಅವರಿಗೆ ಮಂತ್ರಿ ಭಾಗ್ಯ ದೊರೆತಿದೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಸ್ಪೀಕರ್ ಕಾಗೋಡು ತಿಮ್ಮಪ್ಪ ತಮ್ಮ ಸ್ಪೀಕರ್ ಹುದ್ದೆಗೆ ನಾಳೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಹಿರಿಯ ಕಾಂಗ್ರೆಸ್ ನಾಯಕರಾದ ಕಾಗೋಡು, ಈ ಹಿಂದೆ ಹಲವು ಬಾರಿ ಸಚಿವ ಸ್ಥಾನವನ್ನು ನಿಭಾಯಿಸಿ ಅತ್ಯುತ್ತಮ ದಕ್ಷ ರಾಜಕಾರಣಿ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.

ಗಣಿಗಾರಿಕೆ ಕುರಿತಂತೆ ಕೇಸ್‌ಗಳು ದಾಖಲಾಗಿದ್ದ ಹಿನ್ನೆಲೆಯಲ್ಲಿ ಸಂತೋಷ್ ಲಾಡ್ ಅವರನ್ನು ಸಚಿವ ಸಂಪುಟದಿಂದ ದೂರವಿಡಲಾಗಿತ್ತು. ಇದೀಗ ಲಾಡ್ ಅವರಿಗೆ ಮಂತ್ರಿಯಾಗುವ ಯೋಗ ಬಂದಿದೆ.ನಾಳೆ ಅಥವಾ ನಾಡಿದ್ದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments are closed.