ಮನೋರಂಜನೆ

ಘಾಯಲ್-3 ಚಿತ್ರವನ್ನು ನಿರ್ದೇಶನ ಮಾಡುತ್ತೇನೆ: ಸನ್ನಿ ಡಿಯೋಲ್

Pinterest LinkedIn Tumblr

ghaಮುಂಬೈ: ಬಾಲಿವುಡ್ ನಟ ಸನ್ನಿ ಡಿಯೋಲ್ ಘಾಯಲ್ ಚಿತ್ರವನ್ನು ಮತ್ತೆ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ. ಘಾಯಲ್-3 ಚಿತ್ರವನ್ನು ನಿರ್ದೇಶನ ಮಾಡಲಿದ್ದೇನೆ ಎಂದು ನಟ ಸನ್ನಿ ಡಿಯೋಲ್ ಹೇಳಿದ್ದಾರೆ.

ಹಿಂದೆ ತೆರೆ ಕಂಡಿದ್ದ ಘಾಯಲ್ ಚಿತ್ರದಲ್ಲಿ ಸನ್ನಿ ಡಿಯೋಲ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಯಾರಾದರೂ ಉತ್ತಮ ಸ್ಟೋರಿ ಇದೆ ಎಂದು ತಿಳಿಸಿದ್ರೆ. ಆಗ ನಾನು ಚಿತ್ರವನ್ನು ಡೈರೆಕ್ಟ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಆದ್ರೆ ಚಿತ್ರ ನಿರ್ಮಾಣ ಮಾಡುವುದು ಸ್ವಲ್ಪ ಕಷ್ಟಕರವಾದದ್ದು ಎಂದು ತಿಳಿಸಿದ ಅವರು, ನಟನಾಗುವುದು ಸುಲಭ, ಆದ್ರೆ ನಿರ್ಮಾಪಕ ಹಾಗೂ ನಿರ್ದೇಶಕನಾಗುವುದು ತುಂಬಾ ಕಷ್ಟದ ಕೆಲಸ ಎಂದು ತಿಳಿಸಿದರು.

ಮತ್ತೆ ಘಾಯಲ್ ಚಿತ್ರದ ನಿರ್ದೇಶನದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಡೈರೆಕ್ಷನ್ ಆ್ಯಕ್ಟಿಂಗ್‌ಗಿಂತಲೂ ತುಂಬಾ ಡಿಫಿಕಲ್ಟ್… ಆ್ಯಕ್ಟಿಂಗ್ ಮಾಡುವ ವೇಳೆ ನಿರ್ದೇಶಕ ಗೈಡ್ ಮಾಡ್ತಾನೆ ,ಆದ್ರೆ ನಿರ್ದೇಶನ ಮಾಡುವಾಗ ನೀವೇ ಸ್ವತವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Comments are closed.