ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇದ್ದ ದುಬಾರಿ ಹ್ಯೂಬ್ಲೋಟ್ ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ಬುಧವಾರ ಸಿಎಂ ಗೆಳೆಯ ಡಾ.ಗಿರೀಶ್ ಚಂದ್ರ ವರ್ಮಾ ಅವರ ವಿಚಾರಣೆ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ದುಬಾರಿ ವಾಚ್ ಕೊಟ್ಟ ಗೆಳೆಯ ವರ್ಮಾ ಅವರನ್ನು ರೇಸ್ ಕೋರ್ಸ್ ರಸ್ತೆಯಲ್ಲಿರುವ ಎಸಿಬಿ ಕಚೇರಿಯಲ್ಲಿ ಅಧಿಕಾರಿಗಳು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.
ದುಬಾರಿ ಹ್ಯೂಬ್ಲೋಟ್ ವಾಚ್ ರಾಜಕೀಯವಾಗಿ ಹಾಗೂ ಸಾರ್ವಜನಿಕವಾಗಿ ದೊಡ್ಡ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ತದನಂತರ ದುಬಾರಿ ವಾಚ್ ಅನ್ನು ಗೆಳೆಯ ಡಾ.ಗಿರೀಶ್ ಚಂದ್ರ ವರ್ಮಾ ನೀಡಿರುವುದಾಗಿ ಸಿಎಂ ಹೇಳಿ, ವಾಚ್ ಅನ್ನು ಸರ್ಕಾರದ ಸುಪರ್ದಿಗೆ ಒಪ್ಪಿಸುವ ಮೂಲಕ ವಿವಾದಕ್ಕೆ ಅಂತ್ಯ ಹಾಡಿದ್ದರು. ದುಬಾರಿ ವಾಚ್ ವಿವಾದದ ಬಗ್ಗೆ ಪ್ರತಿಪಕ್ಷಗಳು ತನಿಖೆಗೆ ಒತ್ತಾಯಿಸಿದ್ದವು. ಈ ಬಗ್ಗೆ ಸಿಎಂ ವಿರುದ್ಧ ಎಸಿಬಿಗೆ ಕೆಲವರು ದೂರು ಸಲ್ಲಿಸಿದ್ದರು.
-ಉದಯವಾಣಿ
Comments are closed.