ನವದೆಹಲಿ, ಜೂನ್ 11: ರಯೋ ಒಲಿಂಪಿಕ್ಸ್’ನಲ್ಲಿ ಲಿಯಾಂಡರ್ ಪೇಸ್ ಬದಲು ಸಾಕೇತ್ ಮೈನೇನಿ ಜೊತೆ ಡಬಲ್ಸ್ ಆಡಲು ಅವಕಾಶ ಮಾಡಿಕೊಡಿ ಎಂದು ರೋಹನ್ ಬೋಪಣ್ಣ ಮಾಡಿಕೊಂಡ ಮನವಿಯನ್ನು ಭಾರತೀಯ ಟೆನಿಸ್ ಒಕ್ಕೂಟ (ಏಐಟಿಎ) ತಿರಸ್ಕರಿಸಿದೆ.
ಲಿಯಾಂಡರ್ ಪೇಸ್ ಜೊತೆಯೇ ಡಬಲ್ಸ್ ಆಡುವಂತೆ ಬೋಪಣ್ಣಗೆ ಸೂಚಿಸಲಾಗಿದೆ. ಈ ಮೂಲಕ ಲಿಯಾಂಡರ್ ಪೇಸ್’ಗೆ ದಾಖಲೆಯ 7ನೇ ಬಾರಿ ಒಲಿಂಪಿಕ್ಸ್ ಆಡುವ ಅವಕಾಶ ಪ್ರಾಪ್ತವಾಗಿದೆ.
ಇನ್ನು, ಮಿಶ್ರ ಡಬಲ್ಸ್’ನಲ್ಲಿ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಜೊತೆಗೂಡಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಸಾನಿಯಾ ಮಿರ್ಜಾ ಮತ್ತು ಪ್ರಾರ್ಥನಾ ತಾಂಬರೆ ಅವರು ಮತ್ತೆ ಒಲಿಂಪಿಕ್ಸ್’ನಲ್ಲಿ ಜೊತೆಗೂಡಲಿದ್ದಾರೆ.
ಒಲಿಂಪಿಕ್ಸ್ ಟೆನಿಸ್’ನಲ್ಲಿ ಆಡುತ್ತಿರುವ ಭಾರತೀಯರು:
1) ರೋಹನ್ ಬೋಪಣ್ಣ
2) ಲಿಯಾಂಡರ್ ಪೇಸ್
3) ಸಾನಿಯಾ ಮಿರ್ಜಾ
4) ಪ್ರಾರ್ಥನಾ ತಾಂಬರೆ
ಯಾವ್ಯಾವ ಪಂದ್ಯಗಳು?
ಪುರುಷರ ಡಬಲ್ಸ್: ರೋಹನ್ ಬೋಪಣ್ಣ ಮತ್ತು ಲಿಯಾಂಡರ್ ಪೇಸ್
ಮಹಿಳಾ ಡಬಲ್ಸ್: ಸಾನಿಯಾ ಮಿರ್ಜಾ ಮತ್ತು ಪ್ರಾರ್ಥನಾ ತಾಂಬರೆ
ಮಿಶ್ರ ಡಬಲ್ಸ್: ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ
Comments are closed.