ಕರ್ನಾಟಕ

ಕಾನ್ಲೆ ಗ್ರಾಮದ ಕೆರೆಯಲ್ಲಿ ಸ್ಪೋಟಕ ವೈರ್ ಹಾಗೂ ಸ್ಪೋಟಕ ಪುಡಿ ಪತ್ತೆ

Pinterest LinkedIn Tumblr

kamala_pounda_bob

ಸಾಗರ,ಜೂನ್ 10 : ತಾಲೂಕಿನ ತಾಳಗುಪ್ಪ ಹೋಬಳಿಯ ಕಾನ್ಲೆ ಗ್ರಾಮದ ಕೆಲವೆ ಕೆರೆಯಲ್ಲಿ ಗುರುವಾರ ಕೆಲವು ಸ್ಪೋಟಕ ವಸ್ತುಗಳು ಪತ್ತೆಯಾಗಿದೆ.
ಕೆರೆಯಲ್ಲಿ ಗುರುವಾರ ಮೀನು ಹಿಡಿಯಲು ಹೋಗಿದ್ದಾಗ ಮೀನಿಗೆ ಹಾಕಿದ ಗಾಳಕ್ಕೆ ಚೀಲವೊಂದು ಸಿಕ್ಕಿ ಬಿದ್ದಿದೆ. ಅದನ್ನು ಮೇಲಕ್ಕೆ ತಂದು ನೋಡಿದಾಗ ಅದರಲ್ಲಿ 50 ಜಿಲಿಟಿನ್ ಕಡ್ಡಿಗಳು, ಸ್ಪೋಟಕ್ಕೆ ಉಪಯೋಗಿಸುವ ವೈರ್ ಹಾಗೂ ಸ್ಪೋಟಕ ಪುಡಿ ಪತ್ತೆಯಾಗಿದೆ.

ಮೀನುಗಾರರು ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದು, ಕೆರೆ ಸುತ್ತಮುತ್ತಲೂ ಗ್ರಾಮಸ್ಥರು ಜಮಾವಣೆಗೊಂಡು ಸ್ಪೋಟಕ ವಸ್ತುಗಳನ್ನು ನೋಡಿ ಗಾಬರಿಗೊಂಡಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆಯಲ್ಲಿ ಸಿಕ್ಕಿರುವ ಜೆಲೆಟಿನ್ ಕಡ್ಡಿ ಹಾಗೂ ಸ್ಪೋಟಕ ವಸ್ತುಗಳು ಕಲ್ಲು ಸ್ಪೋಟಕ್ಕೆ ಬಳಸಲಾಗುತ್ತದೆ.

ಆದರೆ ಈ ಭಾಗದಲ್ಲಿ ಜಲ್ಲಿ ಕ್ವಾರೆಗಳು ಇಲ್ಲ. ಆದರೆ ಕೆರೆಯಲ್ಲಿ ಹೇಗೆ ಈ ಸ್ಪೋಟಕ ವಸ್ತುಗಳು ಬಂತು ಎನ್ನುವುದು ಪೊಲೀಸರ ತನಿಖೆಯಿಂದ ಹೊರಗೆ ಬರಬೇಕಾಗಿದೆ.

Comments are closed.