ಕರ್ನಾಟಕ

ರಾಜ್ಯಸಭಾ ಚುನಾವಣೆ 3 ಸ್ಥಾನಗಳು `ಕೈ’ ವಶ ಸಿದ್ದು ವಿಶ್ವಾಸ

Pinterest LinkedIn Tumblr

siddaramaiahclr-318x400

ಬೆಂಗಳೂರು, ಜೂ. ೯- ರಾಜ್ಯಸಭಾ ಕಣದಲ್ಲಿರುವ ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಇಲ್ಲಿ ಹೇಳಿದರು.
ಪಕ್ಷದ ಶಾಸಕರ ಸಂಖ್ಯೆಯ ಆಧಾರದ ಮೇಲೆ ಇಬ್ಬರು ಸದಸ್ಯರು ನಿರಾಯಾಸವಾಗಿ ಗೆಲುವು ಸಾಧಿಸಲಿದ್ದಾರೆ. ಉಳಿಕೆಯ ಮತಗಳು ಹಾಗೂ ಪಕ್ಷೇತರ ಶಾಸಕರ ಸಹಕಾರದಿಂದ ಮೂರನೇ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ರಾಜ್ಯ ಸಭಾ ಚುನಾವಣೆಯಲ್ಲಿ ಪಕ್ಷೇತರ ಶಾಸಕರು ನಮ್ಮ ಅಭ್ಯರ್ಥಿಗೆ ಮತ ಚಲಾಯಿಸಲಿದ್ದಾರೆ. ಹೀಗಾಗಿ ರಾಜ್ಯಸಭೆಯ ಮೂರೂ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.
ಮಹಿಳಾ ಉದ್ದಿಮೆದಾರರ ಸಂಘ ನಗರದಲ್ಲಿಂದು ಆಯೋಜಿಸಿದ್ದ ಎಮರ್ಜ್ ಸಮಾವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷೇತರ ಶಾಸಕರು ಪಕ್ಷದ ಮೂರನೇ ಅಭ್ಯರ್ಥಿಗೆ ಮತ ಹಾಕಲಿದ್ದಾರೆ. ಪಕ್ಷೇತರರೆಲ್ಲರೂ ನಮ್ಮ ಜೊತೆ ಇದ್ದಾರೆ ಎಂದು ಹೇಳಿದರು.
ಔತಣಕೂಟ ಇಲ್ಲ
ರಾಜ್ಯಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷೇತರ ಶಾಸಕರುಗಳಿಗಾಗಿ ಇಂದು ಸಂಜೆ ಯಾವುದೇ ಔತಣಕೂಟವನ್ನು ಆಯೋಜಿಸಿಲ್ಲ. ಈ ರೀತಿಯ ವರದಿಗಳಲ್ಲಿ ಸತ್ಯಾಂಶಗಳು ಇಲ್ಲ ಎಂದು ಕಾಂಗ್ರಸ್ ಪಕ್ಷದ ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದಾರೆ ಮತ್ತು ಪಕ್ಷ ನಿಷ್ಠೆ ಉಳ್ಳವರಾಗಿದ್ದಾರೆ. ಹೀಗಾಗಿ ಪಕ್ಷದ ಶಾಸಕರಾರು, ಅಡ್ಡಮತದಾನ ಮಾಡುವುದಿಲ್ಲ, ಪಕ್ಷದ ಮೂವರು ಶಾಸಕರು ಗೆಲುವು ಸಾಧಿಸುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆ ಹಿನ್ನಲೆಯಲ್ಲಿ ನಾಳೆ ಬೆಳಿಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

Comments are closed.