ಕರ್ನಾಟಕ

ಗಾಂಧಿನಗರದಲ್ಲಿ ಫ್ಲಾಪ್ ಆಗುತ್ತಿದ್ದಾರೆಂಬ ಆರೋಪಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯೆ ಏನು…?

Pinterest LinkedIn Tumblr

darshan

ಮೈಸೂರು: ಗಾಂಧಿನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ಫ್ಲಾಪ್ ಆಗುತ್ತಿದ್ದಾರೆಂಬ ಆರೋಪಗಳಿಗೆ ಸ್ವತಃ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಫ್ಲಾಪ್ ನಲ್ಲಿ ಇರುವ ಆರೋಪ ನಿಜವೇ. ಅದಕ್ಕೆ ನಾನು ಸೃಜನ್ ಲೋಕೇಶ್ ಜೊತೆಗೆ ನಟಿಸುತ್ತಿದ್ದೇನೆಂದು ಹೇಳುವ ಮೂಲಕ ತನ್ನ ಮೇಲಿನ ಆರೋಪಕ್ಕೆ ನಗುತ್ತಲೇ ಟಾಂಗ್ ನೀಡಿದ್ದಾರೆ.

ಖಾಸಗಿ ಹೋಟೆಲ್‍ನಲ್ಲಿ ಜಗ್ಗುದಾದಾ ಚಿತ್ರದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಇಂದು ನಟರಾದ ದರ್ಶನ್, ಸೃಜನ್ ಲೋಕೇಶ್, ನಿರ್ದೇಶಕ ರಾಘವೇಂದ್ರ ಹೆಗಡೆ ಮಾತನಾಡಿದರು.

ಚಿತ್ರದಲ್ಲಿ ಡೈಲಾಗ್ಸ್ ಮತ್ತು ಫೈಟ್ ಕಡಿಮೆ ಮಾಡಿದ್ದೀರಾ ಎಂದು ದರ್ಶನ್‍ಗೆ ಕೇಳಿದ್ದಕ್ಕೆ, ಜಗ್ಗುದಾದದಲ್ಲಿ ಎಲ್ಲವೂ ಕಡಿಮೆ ಇದೆ. ಚಿತ್ರದಲ್ಲಿ ಕಾಮಿಡಿ, ಫೈಟ್ಸ್, ಡೈಲಾಗ್ಸ್ ಎಲ್ಲವೂ ಸಿಮಿತವಾಗಿಯೇ ಇದೆ. ಟೈಟಲ್ ಮಾಸ್ ಇದೆ ಎನ್ನುವ ಕಾರಣಕ್ಕೆ ಚಿತ್ರವನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ. ಇಡೀ ಕುಟುಂಬ ಜಗ್ಗುದಾದವನ್ನು ನೋಡಬಹುದು. ಒಬ್ಬ ರೌಡಿ ಮದುವೆಯಾಗಲು ಪಡುವ ಪ್ರಯತ್ನವೇ ಜಗ್ಗುದಾದ. ನನ್ನ ಕೆರಿಯರ್‍ನ ಉತ್ತಮ ಚಿತ್ರ ಎಂದು ಜಗ್ಗುದಾದ ಎಂದು ಹೇಳಿದರು.

ಪ್ರಸ್ತುತ ಸ್ಯಾಂಡಲ್‍ವುಡ್ ಮಾರುಕಟ್ಟೆಯ ಬಗ್ಗೆ ಮಾತನಾಡಿದ ದರ್ಶನ್, ಈಗ 100 ದಿನ ಓಡಿದರೆ ಸಿನಿಮಾ ಹಿಟ್ ಅಂತ ಅಲ್ಲ. ಒಂದು ವಾರದ ಕಲೆಕ್ಷನ್ ಮೇಲೆ ಸಿನಿಮಾ ಹಿಟ್ ನಿರ್ಧರವಾಗಲಿದೆ. ಮೊದಲು 60 ಚಿತ್ರಮಂದಿರದಲ್ಲಿ 100 ದಿನ ಪ್ರದರ್ಶನಗೊಳ್ಳಬೇಕಿತ್ತು. ಈಗ 350 ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ. ಹೀಗಾಗಿ ಈಗಿನ ಚಿತ್ರಗಳು ಬ್ಲಾಕ್ ಬ್ಲಾಸ್ಟರ್ ಹಿಟ್ ಆಗುವುದು ಕಷ್ಟ ಎಂದು ಪ್ರತಿಕ್ರಿಯಿಸಿದರು.

ನಮ್ಮ ಸಿನಿಮಾ ಎಲ್ಲರಂತೆ ವಿದೇಶಗಳಲ್ಲಿ ಬಿಡುಗಡೆಯಾಗಲ್ಲ. ನಮ್ಮದು ಕರ್ನಾಟಕಕ್ಕೆ ಮಾತ್ರ ಸೀಮಿತ. ಹೀಗಾಗಿ ಚಿತ್ರಗಳನ್ನು ಚಿತ್ರ ಮಂದಿರದಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡರು.

ನಿಮಗೆ ಹೀರೋಯಿನ್ ಸಿಗುವುದಿಲ್ಲವಂತೆ ಹೌದಾ ಎಂದು ಕೇಳಿದ್ದಕ್ಕೆ, ನನಗೆ ಹೀರೋಯಿನ್ ಸಿಗುವುದಿಲ್ಲ ಎನ್ನುವುದು ನನ್ನ ಸಮಸ್ಯೆ ಅಲ್ಲ. ಮನೆಯಲ್ಲಿ ಗೊಬ್ಬರ ಜಾಸ್ತಿ ಹಾಕಿದ ಕಾರಣ ಹೀಗೆ ಬೆಳೆದಿದ್ದೇನೆ ಚಾಲೆಂಜಿಗ್ ಸ್ಟಾರ್ ನಗುತ್ತಾ ಉತ್ತರಿಸಿದರು.

Comments are closed.