ಕರ್ನಾಟಕ

ಶಶಿಧರ್ ಮನೆ ಬಾಡಿಗೆ 41 ಸಾವಿರ

Pinterest LinkedIn Tumblr

Shashidharclrಬೆಂಗಳೂರು,ಜೂ.೬-ಭಾರೀ ಕುಳಗಳ ಜೊತೆ ರಿಯಲ್ ಎಸ್ಟೇಟ್ ವ್ಯವಹಾರ ೪೧ ಸಾವಿರ ರೂಗಳ ಮನೆ ಬಾಡಿಗೆ ಐಷಾರಾಮಿ ಜೀವನ ಐಪಿಎಸ್ ಅಧಿಕಾರಿಯೊಬ್ಬರ ಜೊತೆ ಪೊಲೀಸ್ ಮಹಾಸಂಘದ ಶಶಿಧರ್ ಸಂಪರ್ಕ ಹೊಂದಿರುವ ಮಾಹಿತಿ ಲಭ್ಯವಾಗಿದೆ.
ಪೊಲೀಸ್ ಪೇದೆಯಾಗಿ ವಜಾಗೊಂಡ ನಂತರ ಭಾರೀ ಕುಳಗಳ ಜೊತೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಶಶಿಧರ್ ಯಲಹಂಕ ಉಪನಗರದಲ್ಲಿ ೪೧ ಸಾವಿರ ರೂಗಳ ಬಾಡಿಗೆಯ ಮನೆಯಲ್ಲಿ ವಾಸಿಸುತ್ತಿರುವುದು ಐಪಿಎಸ್ ಅಧಿಕಾರಿಯೊಬ್ಬರ ಜೊತೆ ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ.
ಶಶಿಧರ್‌ನನ್ನು ಬಂಧಿಸಿದ ನಂತರ ಅವರ ಯಲಹಂಕ ಉಪನಗರದ ಮನೆಯನ್ನು ಶೋಧಿಸಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದಾಗ ದೊರೆತ ಮಾಹಿತಿಗಳು ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ.
ಪೇದೆಯಾಗಿ ವಜಾಗೊಂಡ ಶಶಿಧರ್ ದೊಡ್ಡ ಮಟ್ಟದಲ್ಲಿ ಹಣವನ್ನು ಮಾಡಿದ್ದಾದರೂ ಹೇಗೆ ಅದರ ಮೂಲ ಯಾವುದು ಯಾರ ಬೆಂಬಲ ಆತನಿಗಿದೆ ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚತೊಡಗಿದ್ದಾರೆ.ಗೃಹಸಚಿವ ಡಾ.ಜಿ.ಪರಮೇಶ್ವರ ಅವರು ಶಶಿಧರ್ ಅವರ ವ್ಯವಹಾರಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಮೌಖಿಕ ಸೂಚನೆ ನೀಡಿರುವುದರಿಂದ ಶಶಿಧರ ಅವರ ಮನೆ ಶೋಧಿಸಿ ದೊರೆತಿರುವ ದಾಖಲೆಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ.
ವೇತನ ತಾರತಮ್ಯ ಹಿರಿಯ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪೊಲೀಸರ ಸಾಮೂಹಿಕ ರಜೆಗೆ ಆಹ್ವಾನ ನೀಡಿದ್ದ ಶಶಿಧರ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಇದೇ ಜೂನ್ ೧೪ರವರಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ.

Comments are closed.